ಪುತ್ತೂರು – ವ್ಯಕ್ತಿ ಕಾಣೆ: ಪತ್ತೆಗೆ ಕೋರಿಕೆ

Spread the love

 ಪುತ್ತೂರು – ವ್ಯಕ್ತಿ ಕಾಣೆ: ಪತ್ತೆಗೆ ಕೋರಿಕೆ

ಮಂಗಳೂರು: ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಸನ್ಯಾಸಿ ಗುಡ್ಡೆ ಮನೆಯಲ್ಲಿ ವಾಸವಾಗಿದ್ದ ಚೆನ್ನಪ್ಪ ನಾಯ್ಕ್ (60 ವರ್ಷ) ಎಂಬುವವರು 2022ರ ಸೆಪ್ಟೆಂಬರ್ 25 ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವರ ಇಂತಿದೆ:

ಎಣ್ಣೆ ಕಪ್ಪು ಮೈಬಣ್ಣ ಹಾಗೂ ಕೇಸರಿ ಪಂಚೆ, ಕಪ್ಪು ಬಣ್ಣದ ಉದ್ದ ತೋಳಿನ ಶರ್ಟ್ ಧರಿಸಿದ್ದು, ತುಳು ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ.

ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ನಿಸ್ತಂತು ವಿಭಾಗ ನಂ:0824-2220500, ಉಪ್ಪಿನಂಗಡಿ ಠಾಣಾ ದೂ.ಸಂಖ್ಯೆ:08251-251055 ಅಥವಾ ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love