ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಜನತೆಗೆ ಸ್ಪಷ್ಟ ಮಾಹಿತಿ ನೀಡಲು ಸರಕಾರ ಶ್ವೇತ ಪತ್ರ ಹೊರಡಿಸಲಿ: ಯು.ಟಿ.ಖಾದರ್

Spread the love

ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಜನತೆಗೆ ಸ್ಪಷ್ಟ ಮಾಹಿತಿ ನೀಡಲು ಸರಕಾರ ಶ್ವೇತ ಪತ್ರ ಹೊರಡಿಸಲಿ: ಯು.ಟಿ.ಖಾದರ್

ಮಂಗಳೂರು: ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆಯ ಬಗ್ಗೆ ನೈಜ ಕಾರಣವನ್ನು ಜನತೆಗೆ ತಿಳಿಸಲು ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರ ಶ್ವೇತ ಪತ್ರಹೊರಡಿಸಲಿ. ಬೆಲೆ ನಿಯಂತ್ರಣಕ್ಕೆ ತಕ್ಷಣ ಸತಕಾರ ಸೂಕ್ತ ಕ್ರಮಕ್ಕೆ ಮುಂದಾಗಲಿ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೇಂದ್ರ ಸರಕಾರ ಇಂಧನದ ಬೆಲೆ ಏರಿಕೆಯ ಹಿಂದಿನ ಯುಪಿಎ ಸರಕಾರ ಪೆಟ್ರೋಲ್ ಕಂಪೆನಿಗಳಿಗೆ ನೀಡಿದ ಬಾಂಡ್ ಕಾರಣ ಎಂದು ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.ಈ ಹಿಂದೆ ವಾಜಪೇಯಿ ನೇತ್ರತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗಲೂ ಬಾಂಡ್ ನೀಡಲಾಗಿದೆ. ಬಾಂಡ್ ಮೂಲಕ ಪಾವತಿಯಾಗ ಬೇಕಾಗದ ಹಣ ಕೇವಲ 3,500 ಕೋಟಿ ರೂ ಮಾತ್ರ.ಉಳಿದ ಮೊತ್ತ ಎಲ್ಲಿಗೆ ಹೋಗುತ್ತದೆ.ನಿಜವಾಗಿ ಬೆಲೆ ಏರಿಕೆ ಕಾರಣ ಏನು ಎಂದು ತಿಳಿಸಲು ಸರಕಾರ ಶ್ವೇತ ಪತ್ರ ಹೊರಡಿಸ ಬೇಕಾದ ಅನಿವಾರ್ಯತೆ ಇದೆ ಎಂದರು.

ದೇಶದಲ್ಲಿ ಅಸಮರ್ಪಕ ಆರ್ಥಿಕ ನೀತಿ, ಸಮರ್ಥ ನಾಯಕತ್ವ ದ ಕೊರತೆ,ಜನ ಸಾಮಾನ್ಯ ರ ನಾಡಿ ಮಿಡಿತ ಅರಿಯಲು ಸಾಧ್ಯವಿಲ್ಲ ದೆ ಇರುವ ಸರಕಾರದಿಂದಾಗಿ ಕೂಲಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ ಗಳು ಜನ ಸಾಮಾನ್ಯರು ಸಂಕಷ್ಟಕ್ಕೆ ಈಡಾಗಿದ್ದಾರೆ.ಈ ರೀತಿ ಬೆಲೆ ಏರಿಕೆಯನ್ನು ಮೌನವಾಗಿ ಜನತೆ ಸಹಿಸಿ ಕೊಂಡಿರುವುದರಿಂದ ಸರಕಾರ ಅಡುಗೆ ಅನಿಲದ ಸಿಲಿಂಡರ್ ಮೇಲೆಯೂ 25 ರೂಪಾಯಿಯನ್ನು ಏರಿಕೆ ಮಾಡಿ ಜನಸಾಮಾನ್ಯರನ್ನು ಸರಕಾರ ಶೋಷಣೆ ಮಾಡುತ್ತಿದೆ. ಬಿಜೆಪಿ ವಾಟ್ಸಪ್ ವಿ.ವಿ.ಯಿಂದ ಸುಳ್ಳಿನ ಪ್ರಚಾರ ನಡೆಯತ್ತಿದೆ.ಜನರಿಗೆ ಅಚ್ಛೇ ದಿನ ನೀಡುತ್ತೇ‌ವೆ.ನಾನು ನಿಮ್ಮ ಚೌಕಿದಾರ, ಕಪ್ಪ ಹಣ ಸ್ವಿಸ್ ಬ್ಯಾಂಕ್ ನಿಂದ ತರುತ್ತೇವೆ ಎನ್ನುವ ಘೋಷಣೆ ಬದಿಗಿರಲಿ ಬಿಜೆಪಿಯ ವರು ಮೊದಲು ಜನರನ್ನು ಈ ರೀತಿ ಬೆಲೆ ಏರಿಕೆಯ ಮೂಲಕ ಲೂಟಿ ಮಾಡುವುದನ್ನು ಮೊದಲು ನಿಲ್ಲಿಸಲಿ ಎಂದು ಶಾಸಕ ಖಾದರ್ ಆರೋಪಿಸಿದರು.

ಶ್ರೀರಾಮಲು ಆಪ್ತನ ವಂಚನೆ ಪ್ರಕರಣ ರಾಜ್ಯ ಸರಕಾರದ ಆಡಳಿತದ ರೀತಿಗೆ ಒಂದು ಉದಾಹರಣೆ. ಜನರು ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತಾರೆ ಎಂದರು.

ಉಳ್ಳಾಲದಲ್ಲಿ ಸುಮಾರು ಒಂದು ಕೋಟಿ ರೂಗಳಿಗೂ ಅಧಿಕ ಮೊತ್ತದಲ್ಲಿ ಚಲನಚಿತ್ರ ನಟ, ಸೋನು ಸೂದ್ ಅವರ ಶೇ80ರ ಕೊಡುಗೆಯೊಂದಿಗೆ ಶೇ.20 ಜಿಲ್ಲಾಡಳಿತದ ಆರ್ಥಿಕ ನೆರವಿನೊಂದಿಗೆ ಆಕ್ಸಿಜನ್ ಉತ್ಪಾದನಾ ಕೇಂದ್ರ ನಿರ್ಮಾಣವಾಗಲಿದೆ ಎಂದು ಹೇಳಿದರು.

ಮಂಗಳೂರು ವಿಧಾನ ಸಭಾ ಕ್ಷೇತ್ರ ಕ್ಕೆ 2.10ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಾತಿ ದೊರೆತಿದೆ. ಬಂಟ್ವಾಳ ಹೊರತು ಪಡಿಸಿದರೆ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಶಾಲೆ ಆರಂಭವಾಗಲಿದೆ ಎಂದು ತಿಳಿಸಿದರು.

ಅಂಬ್ಲಮೊಗರು ಹೈಸ್ಕೂಲ್ ಕಟ್ಟಡಕ್ಕೆ 1.80ಕೋಟಿ ರೂ ಸರಕಾರದಿಂದ ಮಂಜೂರಾಗಿದೆ.ಚೀರಭ ಭಗವತಿ ಕ್ಷೇತ್ರದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ 50ಲಕ್ಷ ರೂ ಬಿಡುಗಡೆ ಯಾಗಿದೆ ಎಂದರು.

ಚೆಂಬುಗುಡ್ಡೆ ಹಿಂದೂ ರುದ್ರ ಭೂಮಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಇನ್ಫೋಸಿಸ್ ಸಂಸ್ಥೆ ಮುಂದೆ ಬಂದಿದೆ. ಇದರ ಸ್ಥಳ ನಿಗದಿ ಬಗ್ಗೆ ಅಲ್ಲಿ ಸ್ಥಳೀಯ ಸಮಿತಿಯ ತೀರ್ಮಾನ ಮುಖ್ಯವಾಗುತ್ತದೆ.ಅವರ ಒಪ್ಪಿಗೆಯ ಪ್ರಕಾರ ಅಲ್ಲಿ ವಿದ್ಯುತ್ ಚಿತಗಾರ ಆಗಬೇಕೆ? ಬೇಡವೇ? ಎನ್ನುವುದು ತೀರ್ಮಾನವಾಗಲಿದೆ ನಾನು ಯಾರ ಮೇಲೂ ಒತ್ತಡ ಹೇರಿಲ್ಲ. ಇಂತಹ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಯು.ಟಿ.ಖಾದರ್ ತಿಳಿಸಿದರು.

 ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು,ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್, ಸಂತೋಷ್ ಶೆಟ್ಟಿ, ಜಬ್ಬಾರ್, ಸುರೇಶ್ ಭಟ್ನಗರ, ರಮೇಶ್, ಜಕ್ರಿಯ, ಅಲ್ವಿನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.


Spread the love