‘ಪೇಸಿಎಂ’ ಟೀ ಶರ್ಟ್ ಧರಿಸಿದ್ದ ಯುವಕನ ಬಂಧನ

Spread the love

‘ಪೇಸಿಎಂ’ ಟೀ ಶರ್ಟ್ ಧರಿಸಿದ್ದ ಯುವಕನ ಬಂಧನ

ಚಾಮರಾಜನಗರ: ರಾಜ್ಯದಲ್ಲಿ 2ನೇ ದಿನಕ್ಕೆ ಕಾಲಿಟ್ಟಿರುವ ಭಾರತ್ ಜೋಡೋ ಯಾತ್ರೆಯಲ್ಲಿ ‘ಪೇಸಿಎಂ’ ಟೀ ಶರ್ಟ್ ಧರಿಸಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಮೂಲದ ಅಕ್ಷಯ್ ಕುಮಾರ್ ಬಂಧಿತ ಯುವಕನಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವ ಚಿತ್ರ ಇರುವ ಟೀ ಶರ್ಟ್ ಧರಿಸಿ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದ್ದಾನೆಂಬ ಆರೋಪದ ಮೇಲೆ ಈತನ ವಿರುದ್ಧ ಚಾಮರಾಜನಗರ ಸೆನ್ ಠಾಣೆಯಲ್ಲಿ ಕಿರಣ್ ಎಂಬವರು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿತ್ತು.

ಇಂದು (ಶನಿವಾರ) ಕೂಡ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಅಕ್ಷಯ್ ಕುಮಾರ್, ಪೇಸಿಎಂ ಟೀ ಶರ್ಟ್ ಧರಿಸಿದ್ದ ಎನ್ನಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ ಶಿವಕುಮಾರ್ ನೇತೃತ್ವದ ಪೊಲೀಸರ ತಂಡವು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ಯುವಕ ಧರಿಸಿದ್ದ ಪೇಸಿಎಂ ಟೀ ಶರ್ಟ್ ಬಿಚ್ಚಿಸಿ, ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.


Spread the love