ಪೊಲೀಸರಿಗೆ ಸೈನಿಕರಂತೆ ಗೌರವ ನೀಡಬೇಕು : ನ್ಯಾ. ಶಾಂತವೀರ ವೀರಪ್ಪ

Spread the love

ಪೊಲೀಸರಿಗೆ ಸೈನಿಕರಂತೆ ಗೌರವ ನೀಡಬೇಕು : ನ್ಯಾ. ಶಾಂತವೀರ ವೀರಪ್ಪ

ಉಡುಪಿ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಮ್ಮ ಜೀವವನ್ನೇ ಪಣಕಿಟ್ಟು ಹಗಲಿರುಳು ಶ್ರಮಿಸುವ ಪೊಲೀಸರಿಗೆ , ದೇಶದ ಗಡಿಯ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ನೀಡುವಷ್ಠು ಗೌರವ ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ವೀರಪ್ಪ ಹೇಳಿದರು.

ಅವರು ಇಂದು ಉಡುಪಿ ಜಿಲ್ಲಾ ಪೋಲೀಸ್ ವತಿಯಿಂದ,ಚಂದು ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ , ಪೊಲೀಸ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಪೊಲೀಸರು ದೇಶದೊಳಗೆ ಅಡಗಿರುವ ವಿದ್ರೋಹಿಗಳನ್ನು ಪತ್ತೆ ಹಚ್ಚಿ , ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅವಿರತವಾಗಿ ಶ್ರಮಿಸುತ್ತಿದ್ದು, ಇವರಿಗೆ ಆಧುನಿಕ ಶಸ್ತಾಸ್ತ್ರಗಳನ್ನು ನೀಡುವ ಮೂಲಕ ಸಶಕ್ತಗೊಳಿಸಿ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ದಗೊಳಿಸಬೇಕು. ಇವರ ಸೇವೆ ತ್ಯಾಗ ಬಲಿದಾನಕ್ಕೆ ಸೈನಿಕರಿಗೆ ನೀಡಿದಷ್ಟು ಗೌರವ ನೀಡಬೇಕು. ಕಾನೂನು ಪಾಲನೆ ಕುರಿತು ಸಾರ್ವಜನಿಕರಿಗೂ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಎಂತಹ ಕ್ಲಿಸ್ಟಕರ ಸಮಯದಲ್ಲೂ ಸಹ ಪೊಲೀಸರು ಎದೆಗುಂದದೇ ಕರ್ತವ್ಯ ನಿರ್ವಹಿಸುತ್ತಿದ್ದು, ಕೋವಿಡ್19 ಮತ್ತು ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಇವರ ಸೇವೆ ಶ್ಲಾಘನೀಯವಾಗಿದೆ. ಜಿಲ್ಲೆಯಲ್ಲಿ ಪೊಲೀಸರು ಮಾದಕ ವಸ್ತುಗಳ ನಿಯಂತ್ರಣ ಕಾರ್ಯಚರಣೆಯಲ್ಲಿ ಕೇವಲ 1 ತಿಂಗಳಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಇತರೆ ಜಿಲ್ಲೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಈ ವರ್ಷ ರಾಜ್ಯದ 11 ಸೇರಿದಂತೆ ದೇಶದಲ್ಲಿ ಹುತಾತ್ಮರಾದ ಒಟ್ಟು 261 ಪೊಲೀಸರ ಹೆಸರುಗಳನ್ನು ಸ್ಮರಣೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಮಾತನಾಡಿ, ಪೊಲೀಸರ ತ್ಯಾಗ ಬಲಿದಾನ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಹೆಚ್, ಕಾರ್ಕಳ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ ಆಶಿಷ್ ರೆಡ್ಡಿ , ಹೆಚ್ಚವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಉಪಸ್ಥಿತರಿದ್ದರು.

ಸೆನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ್ ನಿರೂಪಿಸಿ, ವಂದಿಸಿದರು.

Click Here To View More Photos


Spread the love