ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಮೇಲೆ ನಾಲ್ವರ ಬಂಧನ

Spread the love

ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಮೇಲೆ ನಾಲ್ವರ ಬಂಧನ

ಮಂಗಳೂರು: ಮುಲ್ಕಿ ಸಮೀಪದ ಕೆಎಸ್ ರಾವ್ ನಗರ ನಿವಾಸಿ ಎರಡು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ಮನೆಗೆ ನೋಟಿಸ್ ನೀಡಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅನ್ಸಾರ್ (20), ಸಾಧಿಕ್, ಜುಬೈದಾ, ಮುಮ್ತಾಜ್ ಎಂದು ಗುರುತಿಸಲಾಗಿದೆ.

ಬಂಧಿತ ಪ್ರಮುಖ ಆರೋಪಿ ಅನ್ಸಾರ್ ಮೇಲೆ ಹಲವಾರು ಆರೋಪಗಳಿದ್ದು, ಗುರುವಾರ ಮುಲ್ಕಿ ಠಾಣಾ ಎಎಸ್ ಐ ಅಶೋಕ್ ಅವರು ನೋಟಿಸು ನೀಡಲು ಹೋದ ವೇಳೆ ನಾಲ್ವರು ಸೇರಿ ಅವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದರು . ಗಾಯಗೊಂಡ ಎ ಎಸ್ ಐ ಅವರು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗದ್ದು ವಿಚಾರಣೆ ನಡೆಯುತ್ತಿದೆ.


Spread the love

Leave a Reply

Please enter your comment!
Please enter your name here