Home Mangalorean News Kannada News ಪೊಲೀಸ್ ಇಲಾಖೆಗೆ ಹುದ್ದೆಗಳ ನೇರ ನೇಮಕಾತಿ ಮುಂದೂಡಿಕೆ

ಪೊಲೀಸ್ ಇಲಾಖೆಗೆ ಹುದ್ದೆಗಳ ನೇರ ನೇಮಕಾತಿ ಮುಂದೂಡಿಕೆ

Spread the love

ಪೊಲೀಸ್ ಇಲಾಖೆಗೆ ಹುದ್ದೆಗಳ ನೇರ ನೇಮಕಾತಿ ಮುಂದೂಡಿಕೆ

ಉಡುಪಿ : 2020-21ನೆ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್ಸ್ ಪೆಕ್ಟರ್ (ಸಿವಿಲ್) -431 ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಕಲ್ಯಾಣ ಕರ್ನಾಟಕ)-125 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಜು. 1ರಿಂದ ಜ. 30ರವರೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವುದಾಗಿ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿತ್ತು.

ಆದರೆ ಸರ್ಕಾರದ ಸೂಚನೆಯಂತೆ ಆಡಳಿತಾತ್ಮಕ ಕಾರಣಗಳಿಂದಾಗಿ ಅರ್ಜಿ ಆಹ್ವಾನದ ದಿನಾಂಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ. ಮುಂದಿನ ಅರ್ಜಿ ಆಹ್ವಾನ ದಿನಾಂಕವನ್ನು ಅಭ್ಯರ್ಥಿಗಳ ಗಮನಕ್ಕೆ ತರಲಾಗುವುದು ಎಂದು ಪ್ರಕಟನೆ ತಿಳಿಸಿದೆ.


Spread the love

Exit mobile version