ಪೊಲೀಸ್ ಜೀಪ್ ಗೆಡಿಕ್ಕಿ: ಬೈಕ್ ಸವಾರ ಸಾವು

Spread the love

ಪೊಲೀಸ್ ಜೀಪ್ ಗೆಡಿಕ್ಕಿ: ಬೈಕ್ ಸವಾರ ಸಾವು

ನಂಜನಗೂಡು: ಪೊಲೀಸ್ ಜೀಪಿಗೆ ಡಿಕ್ಕಿಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಗರದಲ್ಲಿ ನಡೆದಿದೆ.

ಟ್ರಾಫಿಕ್ ಪೊಲೀಸ್ ಠಾಣೆ ಮುಂಭಾಗವೇ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿದ್ದು ಪರಿಣಾಮ ಬೈಕ್ ಸವಾರ ಮುದ್ದಳ್ಳಿ ಗ್ರಾಮದ ಅಭಿ(25) ಮೃತಪಟ್ಟಿದ್ದಾನೆ. ಈತ ನಂಜನಗೂಡಿನಿಂದ ಗುಂಡ್ಲುಪೇಟೆ- ಊಟಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುದ್ದಳ್ಳಿ ಗ್ರಾಮಕ್ಕೆ ತನ್ನ ಪಲ್ಸರ್ ಬೈಕ್ (KA-09 HM2984) ನಲ್ಲಿ ತೆರಳುವ ವೇಳೆ ನಂಜನಗೂಡು ಟ್ರಾಫಿಕ್ ಪೊಲೀಸ್ ಠಾಣೆ ಒಳಗಿನಿಂದ ಬಂದ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಗಂಭೀರಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love