
ಪೋರ್ಟ್ ವಾರ್ಡಿ ನಲ್ಲಿ ಕಾಂಗ್ರೆಸ್ ವತಿಯಿಂದ ದಿನ ಸಾಮಗ್ರಿಗಳ ಕಿಟ್ ವಿತರಣೆ
ಮಂಗಳೂರು: ರೋಸಾರಿಯೋ ಚರ್ಚ್ ನ ಮಿನಿ ಹಾಲ್ ನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪೋರ್ಟ್ ವಾರ್ಡಿನಲ್ಲಿರುವ ಬಡ ವರ್ಗದ ಜನರಿಗೆ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು,ಕೊರೋನಾ ಮಹಾಮಾರಿ ರೋಗ ಬಂದ ಮೇಲೆ ಸಮಾಜದ ಪರಿಸ್ಥಿತಿ ಬದಲಾಗಿದೆ. ಸರಕಾರ ವಿಧಿಸಿದ ಲಾಕ್ ಡೌನ್ ನಿಂದ ಜನರ ಕಷ್ಟ ಹೇಳತೀರದು. ಜನರಿಗೆ ಕೆಲಸವೂ ಇಲ್ಲ, ಆದಾಯವೂ ಇಲ್ಲ. ಜೀವನ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಪರಿಸ್ಥಿತಿಯ ಸತ್ಯವನ್ನು ಅರಿತು ಕಾಂಗ್ರೆಸ್ ಪಕ್ಷವು ಇಂದು ಜನರ ಬಳಿಗೆ ಬಂದಿದೆ. ನಿರಾಶ್ರಿತರಿಗೆ ಹಾಗೂ ನಿರ್ಗತಿಕರಿಗೆ ಮದ್ಯಾಹ್ನ ದ ಹಾಗೂ ಸಂಜೆಯ ಊಟದ ವ್ಯವಸ್ಥೆಯನ್ನು ಕಾಂಗ್ರೆಸ್ ಪಕ್ಷವು ಲಾಕ್ ಡೌನ್ ಪ್ರಾರಂಭದಿಂದ ಇಂದಿನ ತನಕ ಮಾಡುತ್ತಾ ಬಂದಿದೆ. ರೋಗಿಗಳಿಗೆ ಅವರ ಮನೆಯಿಂದ ಆಸ್ಪತ್ರೆಗೆ ಕೊಂಡೊಯ್ಯಲು ಆಂಬುಲೆನ್ಸ್ ವ್ಯವಸ್ಥೆ ಯನ್ನು ಕಲ್ಪಿಸಿದೆ. ಜೀವನವನ್ನು ನಡೆಸಲು ದಿನ ವಸ್ತುಗಳ ಕಿಟ್ ಗಳನ್ನು ವಿತರಿಸುವಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮಾಡುತ್ತಾ ಬಂದಿರುತ್ತಾರೆ. ಬಡವರಿಗೆ ಸ್ಪಂದನೆ ಮಾಡುವ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂದರು.
ಕಾರ್ಯಕ್ರಮದಲ್ಲಿ ರೋಸಾರಿಯೋ ಚರ್ಚ್ ಮುಖ್ಯ ಧರ್ಮಗುರು ಫಾ. ಆಲ್ಫ್ರೆಡ್ ಪಿಂಟೋ, ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್,ಚರ್ಚ್ ನ ಸಹಾಯಕ ಧರ್ಮಗುರು ಫಾ. ವಿನೋದ್ ಲೋಬೊ, ಎಲಿಜಬೆತ್ ರೋಚ್, ಟಿ. ಕೆ. ಸುಧೀರ್, ನೀರಜ್ ಪಾಲ್, ರಮಾನಂದ ಪೂಜಾರಿ, ಸಂಜೀವ ಕೋಟ್ಯಾನ್, ಉದಯ್ ಕುಂದರ್,ಗಿಲ್ಬರ್ಟ್ ಡಿಸಿಲ್ವ, ಝಹೀರ್, ಸಿದ್ದೀಕ್, ಅಲ್ವಿನ್, ಸಾಲಿ, ಚಿನ್ನಪ್ಪ, ಲ್ಯಾನ್ಸಿ, ಸುಜಾತ, ಶಾಲಿನಿ, ವನಿತಾ, ಸುರೇಖಾ, ಸಲುಂದರ್ ಡಿಸೋಜಾ, ಶಶಿ ಕುಮಾರ್, ವಿಜಯೇಂದ್ರ, ಕೃತಿನ್ ಕುಮಾರ್, ಆಸೀಫ್ ಜೆಪ್ಪು, ಸವಾನ್, ಯಶವಂತ ಪ್ರಭು, ರೋಷನ್, ಶಾನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.