ಪ್ರಕಾಶ್ ರೈಯಿಂದ ಹೋಲಿಕ್ರಾಸ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಕೊಡುಗೆ

Spread the love

ಪ್ರಕಾಶ್ ರೈಯಿಂದ ಹೋಲಿಕ್ರಾಸ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಕೊಡುಗೆ

ಚಾಮರಾಜನಗರ: ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹೋಲಿಕ್ರಾಸ್ ಆಸ್ಪತ್ರೆಗೆ ಬಹು ಭಾಷಾ ನಟ ನಿರ್ದೇಶಕ ಪ್ರಕಾಶ್ ರೈ ತಮ್ಮ ಪಿ ಆರ್ ಎಫ್ ಫೌಂಡೇಶನ್ ವತಿಯಿಂದ ಆಂಬ್ಯುಲೆನ್ಸ್ ನ್ನು ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಕಿಚಗುತ್ತಿ ಮಾರಮ್ಮ ನ ದೇವಾಲಯದಲ್ಲಿ ವಿಷ ಪ್ರಸಾದ ದುರಂತವಾದ ವೇಳೆ ಸಾಕಷ್ಟು ಆರೋಗ್ಯ ಸೇವೆಯನ್ನು ಹೋಲಿಕ್ರಾಸ್ ಆಸ್ಪತ್ರೆ ನೀಡಿದೆ. ಹೀಗಾಗಿ ಸುತ್ತಮುತ್ತಲ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರ ಅನುಕೂಲಕ್ಕಾಗಿ ಮತ್ತು ಕಟ್ಟ ಕಡೆಯ ಪ್ರಜೆಗಳಿಗೂ ತುರ್ತು ಚಿಕಿತ್ಸೆ ಸಿಗಲಿ ಎಂಬ ಉದ್ದೇಶದಿಂದ ನೀಡಲಾಗುತ್ತಿದೆ ಎಂದರು.

ಸಿಸ್ಟರ್ ಡೆಲಿನ ಮಾತನಾಡಿ ನಮ್ಮ ಆಸ್ಪತ್ರೆಯ ಸೇವೆ ಗುರುತಿಸಿ ಇಂದು ನೀಡಿರುವ ಆಂಬ್ಯುಲೆನ್ಸ್ ನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದು, ಕಾಡಂಚಿನ ಗುಡ್ಡ ಪ್ರದೇಶದ ಜನರಿಗೆ ಇದರ ಸೌಲಭ್ಯ ಸಿಗಲಿದೆ ಎಂದರಲ್ಲದೆ ಪ್ರಕಾಶ್ ರೈ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹೋಲಿಕ್ರಾಸ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಡೆಲಿನ, ಸಿಸ್ಟರ್ ಗ್ರಾಸಿಯ ಮತ್ತು ಸಿಬ್ಬಂದಿ ಇದ್ದರು.


Spread the love