ಪ್ರಚಾರಕ್ಕಾಗಿ ಭೂಮಿಪೂಜೆ ಮಾಡುವುದಿಲ್ಲ:ಹರ್ಷವರ್ಧನ್

Spread the love

ಪ್ರಚಾರಕ್ಕಾಗಿ ಭೂಮಿಪೂಜೆ ಮಾಡುವುದಿಲ್ಲ:ಹರ್ಷವರ್ಧನ್

ನಂಜನಗೂಡು: ಅನುದಾನ ಇಲ್ಲದಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಾರಕ್ಕಾಗಿ ಭೂಮಿ ಪೂಜೆ ಮಾಡದೆ ಅನುದಾನ ತಂದು ಭೂಮಿ ಪೂಜೆಯನ್ನು ಮಾಡುತ್ತಿರುವುದಾಗಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ.

ನಂಜನಗೂಡು ಪಟ್ಟಣದ ತಾಲ್ಲೂಕು ಕಚೇರಿಯ ಬಳಿ ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ಗುರು ಭವನಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಾಥಮಿಕ ಶಾಲೆಯಿಂದ ಇಂಜಿನಿಯರ್ ಮುಗಿಯುವವರೆಗೂ ನನಗೆ ವಿದ್ಯೆ ಕಲಿಸಿದ ಎಲ್ಲ ಗುರುಗಳನ್ನು ಸ್ಮರಿಸಿಕೊಂಡು ಗುರುಭವನಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದ್ದೇನೆ ಎಂದ ಅವರು, ನಂಜನಗೂಡು ಪಟ್ಟಣವನ್ನು ಸ್ಯಾಟಲೈಟ್ ನಗರವನ್ನಾಗಿಸುವುದೇ ನನ್ನ ಕನಸು ಮತ್ತು ಗುರಿಯಾಗಿದೆ. ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನಾವು ನೀಡಬೇಕು ಅದು ನಮ್ಮ ಮೊದಲ ಆದ್ಯತೆ ಆಗಿರಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆಗೆ 2018 ರಿಂದ 2023 ರವರೆಗೆ 25 ಕೋಟಿ ಅನುದಾನ ನೀಡಿದ್ದೇನೆ ಕೆಲವೊಮ್ಮೆ 25 ಕೋಟಿ ಹೇಗೆ ತಂದೆ ಎಂಬುದು ಆಶ್ಚರ್ಯವಾಗುತ್ತದೆ. 2013 ಚುನಾವಣಾ ಪೂರ್ವದಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಮೊದಲು ಶಾಲೆಯನ್ನು ತೋರಿಸಿ ಶೀತಲ ವ್ಯವಸ್ಥೆಯ ಕೊಠಡಿಗಳನ್ನು ನನಗೆ ತೋರಿಸುತ್ತಿದ್ದರು ಅಂದೇ ಅಂದುಕೊಂಡಿದ್ದೆ ಹೆಚ್ಚಿನ ಅನುದಾನ ತಂದು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಬೇಕೆಂದು ಅದರಂತೆ ಗುರುಭವನಕ್ಕೆ ಭೂಮಿಪೂಜೆ ಮಾಡಿರುವುದಾಗಿ ಹೇಳಿದರು.

ಶಿಕ್ಷಣ ಇಲಾಖೆ ಬಿಇಓ ರಾಜು ಮಾತನಾಡಿ ಸರ್ಕಾರಿ ಶಾಲೆಗಳ ಬಗ್ಗೆ ಶಾಸಕರು ಹೆಚ್ಚು ಅಪಾರ ಅಭಿಮಾನದಿಂದ ಹೆಚ್ಚಿನ ಅನುದಾನ ತಂದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇದರ ಜೊತೆಗೆ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಲೇಬೇಕು ಎಂಬುದೇ ಇವರ ಗುರಿಯಾಗಿತ್ತು. ಶಾಲೆಗಳಿಗೆ ಪೀಠೋಪಕರಣಗಳು ಕಂಪ್ಯೂಟರ್ ಹಾಗೂ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದ್ದಾರಲ್ಲದೆ ಅವರ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿರುವುದಾಗಿ ಶ್ಲಾಘಿಸಿದರು.

ಇದೇ ವೇಳೆ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 40 ಶಿಕ್ಷಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


Spread the love