ಪ್ರಜಾಪ್ರಭುತ್ವದ ನ್ಯಾಯಯುತ ಹೋರಾಟಕ್ಕೆ ಬೆದರಿಕೆ ಖಂಡನೀಯ: ಜೆಡಿಎಸ್ ದ.ಕ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ

Spread the love

ಪ್ರಜಾಪ್ರಭುತ್ವದ ನ್ಯಾಯಯುತ ಹೋರಾಟಕ್ಕೆ ಬೆದರಿಕೆ ಖಂಡನೀಯ: ಜೆಡಿಎಸ್ ದ.ಕ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ

ಆಕ್ಟೋಬರ್ 18 ರಂದು ನಡೆಯಲಿರುವ ಶಾಂತಿಯುತ ಪ್ರತಿಭಟನೆಗೆ ತಡ ರಾತ್ರಿ ಮುಖಂಡರ ಮನೆಗಳಿಗೆ ಪ್ರತಿಭಟನೆ ತಡೆಯಲು ನೋಟಿಸ್ ಜಾರಿ ಮಾಡಿ ಬೆದರಿಸುವುದು ಖಂಡನೀಯ. ಇದು ಯಾವುದೇ ದೇಶ ವಿರೋಧಿ ಕ್ರತ್ಯವಲ್ಲ. ಕಳೆದ 6 ವರುಷಗಳಿಂದ ಜನರನ್ನು ಮೋಸ ಮಾಡಿ ಸರ್ಕಾರ ಹಣ ವಸೂಲಿ ಮಾಡುವ ಬಗ್ಗೆ ಹಲವು ಮನವಿ ಹಾಗೂ ಹೋರಾಟ ಮಾಡಿ ಸ್ಪಂದಿಸದ ಬಗ್ಗೆ ಜನಸಾಮಾನ್ಯರ ತ್ರೀವ ಮನ ನೋವಿನ ಸಂಘಟಿತ ಹೋರಾಟ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಜನಪರ ಕಾಳಜಿವಿದಲಿ ಇಂದೇ ಟೋಲ್ ಗೇಟ್ ರದ್ದು ಮಾಡಿ ನಾವು ಜನ ಸಾಮಾನ್ಯರ ಓಟ್ಟಿಗೆ ಇದೆವೇ ಎಂದು ತೋರಿಸಲಿ.ಇದರಿಂದ ಯಾವುದೇ ಸಂಘಟನೆ ಅಥವಾ ಪಕ್ಷಗಳು ಇದರ ಲಾಭ ಅಪೇಕ್ಷಿಸುವುದಿಲ್ಲ. ಎಂದು ಜೆಡಿಎಸ್ ದ.ಕ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ತಿಳಿಸಿದಾರೆ.


Spread the love