ಪ್ರತಿಭಾ ಕುಳಾಯಿ ಮನೆಗೆ ಪೊಲೀಸರು ಮಧ್ಯರಾತ್ರಿ ತೆರಳಿ ನೋಟಿಸ್ ನೀಡಲು ಅವರೇನು ಕೊಲೆ ಆರೋಪಿಯೇ? – ವೆರೋನಿಕಾ ಕರ್ನೆಲಿಯೊ

Spread the love

ಪ್ರತಿಭಾ ಕುಳಾಯಿ ಮನೆಗೆ ಪೊಲೀಸರು ಮಧ್ಯರಾತ್ರಿ ತೆರಳಿ ನೋಟಿಸ್ ನೀಡಲು ಅವರೇನು ಕೊಲೆ ಆರೋಪಿಯೇ? – ವೆರೋನಿಕಾ ಕರ್ನೆಲಿಯೊ

ಉಡುಪಿ: ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದಲ್ಲಿ ತೊಡಗಿಸಿಕೊಂಡ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರ ಮನೆಗೆ ಪೊಲೀಸರು ಶನಿವಾರ ಮಧ್ಯರಾತ್ರಿ ತೆರಳಿ ನೋಟಿಸ್ ಜಾರಿ ಮಾಡಲು ಅವರೇನು ಕೊಲೆ ಮಾಡಿದ್ದಾರೆಯೇ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೊ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಸುರತ್ಕಲ್ ನಲ್ಲಿ ಅಕ್ರಮವಾಗಿ ಟೋಲ್ ಪ್ಲಾಜಾ ಕಾರ್ಯಾಚರಣೆ ನಡೆಸುತ್ತಿದ್ದು ಇದಕ್ಕೆ 20 ಕಿಮಿ ಸಮೀಪದಲ್ಲೇ ಹೆಜಮಾಡಿಯಲ್ಲಿ ಕೂಡ ಟೋಲ್ ಪ್ಲಾಜಾ ಇರುವುದರಿಂದ ಒಂದನ್ನು ತೆರವುಗೊಳಿಸುವಂತೆ ಹೋರಾಟಗಾರರು ಮನವಿ ಮಾಡುತ್ತಾ ಬಂದರೂ ಕೂಡ ಬಿಜೆಪಿ ಸಂಸದರು ಮತ್ತು ಶಾಸಕರು ಕಿವಿ ಕೇಳಿಯೂ ಕೇಳದಂತೆ ನಟಿಸುತ್ತಿದ್ದಾರೆ. ಸರಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯ ವಿರುದ್ದ ಅಕ್ಟೋಬರ್ 18ರಂದು ಆಯೋಜಿಸಿರುವ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಸರಕಾರ ಪೊಲೀಸರ ಮೂಲಕ ನೋಟಿಸ್ ನೀಡಿ ಬೆದರಿಸುವ ಕೆಲಸ ಮಾಡುತ್ತಿದೆ.

ಪೊಲೀಸರಿಗೆ ಒಂದು ವೇಳೆ ನೋಟಿಸ್ ನೀಡುವ ಅಗತ್ಯತೆ ಇದ್ದದ್ದೇ ಆದರೆ ಬೆಳಗಿನ ಹೊತ್ತು ಬರುವುದುನ್ನು ಬಿಟ್ಟು ಮಧ್ಯರಾತ್ರಿ ಬರುವ ಅಗತ್ಯತೆ ಇರಲಿಲ್ಲ. ಪೊಲೀಸರ ಈ ವರ್ತನೆಯಿಂದ ಪ್ರತಿಭಾ ಅವರ ಅತ್ತೆ ಭಯಬೀತರಾಗಿದ್ದು ಇದಕ್ಕೆ ಯಾರು ಹೊಣೆ? ಪ್ರತಿಭಾ ಕುಳಾಯಿ ಅವರ ಹೋರಾಟದೊಂದಿಗೆ ಎಲ್ಲರೂ ಕೈಜೋಡಿಸಿ ಟೋಲ್ ನ್ನು ಮುಚ್ಚಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love