ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ಅಗತ್ಯ: ವಿನಯ್ ಆಳ್ವ

Spread the love

ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ಅಗತ್ಯ: ವಿನಯ್ ಆಳ್ವ

ಮೂಡುಬಿದಿರೆ: ‘ಪ್ರತಿಯೊಬ್ಬರಲ್ಲಿ ಪ್ರತಿಭೆ ಇರುತ್ತದೆ. ಅದಕ್ಕೆ ಸೂಕ್ತ ಮಾರ್ಗದರ್ಶನ ಸಿಕ್ಕಿದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ಟ್ರಸ್ಟಿ ಡಾ. ವಿನಯ್ ಆಳ್ವ ಹೇಳಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಂಸ್ಕøತಿಕ ಸಂಘದ ವತಿಯಿಂದ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ವಾಣಿಜ್ಯಶಾಸ್ತ್ರ ಹಾಗೂ ಕಲಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು.

‘ನಾವೆಲ್ಲರೂ ಪಿ.ಯು.ಸಿ. ಹಂತವನ್ನು ದಾಟಿ ಬಂದಿದ್ದೇವೆ. ಆದರೆ, ನಿಮ್ಮಲ್ಲಿರುವ ಅಸಾಮಾನ್ಯ ಪ್ರತಿಭೆ ನಮ್ಮಲ್ಲಿ ಇರಲಿಲ್ಲ. ನಿಮ್ಮ ಕೌಶಲಕ್ಕೆ ಆಳ್ವಾಸ್‍ನಲ್ಲಿ ಸೂಕ್ತ ವೇದಿಕೆ ದೊರಕಿದೆ. ಜ್ಞಾನ- ಕೌಶಲಗಳನ್ನು ವೃದ್ಧಿಸಿಕೊಳ್ಳಿ’ ಎಂದರು.

‘ಸತತ ಪರಿಶ್ರಮದಿಂದಲೇ ಸಾಧಕರಾಗಲು ಸಾಧ್ಯ. ನೀವು ಈಗ ಪಡುವ ಪರಿಶ್ರಮವು ನಿಮ್ಮ ಭವಿಷ್ಯವನ್ನು ಉತ್ತಮಗೊಳಿಸುತ್ತದೆ’ ಎಂದರು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಮಹಮ್ಮದ್ ಸದಾಕತ್ ಮಾತನಾಡಿ, ಜೀವನದ ಯಶಸ್ಸಿಗೆ ಪರಿಶ್ರಮ ಒಂದೇ ಮಂತ್ರ. ಆತ್ಮ ವಿಶ್ವಾಸ, ವ್ಯಕ್ತಿತ್ವ ವಿಕಸನದ ಗುಣ ಹಾಗೂ ಸಮಯ ನಿμÉ್ಠಯಿದ್ದರೆ ಯಶಸ್ಸು ನಿಮ್ಮದಾಗುತ್ತದೆ’ ಎಂದರು.

ಡಾ.ಎಂ. ಮೋಹನ ಆಳ್ವ ಹಾಗೂ ಆಳ್ವಾಸ್ ಬಳಗದ ಶ್ರಮದಿಂದ ಆಳ್ವಾಸ್ ಸಂಸ್ಥೆಯ ಯಶಸ್ಸು ಸಾಧ್ಯವಾಗಿದೆ. ಆಳ್ವಾಸ್ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇದರ ಹಿಂದಿನ ಶಕ್ತಿಯೇ ಡಾ. ಮೋಹನ ಆಳ್ವ ಎಂದರು.

ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಇದ್ದರು. ಉಪನ್ಯಾಸಕಿ ಮೇಘನಾ ಸ್ವಾಗತಿಸಿದರು. ಉಪನ್ಯಾಸಕರಾದ ರಾಜೇಶ್ ಡಿಸೋಜ ನಿರೂಪಿಸಿದರು, ಪ್ರಮಥ್ ಶೆಟ್ಟಿ ವಂದಿಸಿದರು.


Spread the love