ಪ್ರತಿಯೊಬ್ಬರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು – ನ್ಯಾಯವಾದಿ ರವಿಕಿರಣ್‌ ಮುರ್ಡೇಶ್ವರ್

Spread the love

ಪ್ರತಿಯೊಬ್ಬರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು – ನ್ಯಾಯವಾದಿ ರವಿಕಿರಣ್‌ ಮುರ್ಡೇಶ್ವರ್

ಕುಂದಾಪುರ: ನಾವೆಲ್ಲರೂ ಸಂವಿಧಾನವನ್ನು ಓದಿ ಅರ್ಥಮಾಡಿಕೊಳ್ಳಬೇಕು. ನಮ್ಮೆಲ್ಲರ ಪವಿತ್ರ ಗ್ರಂಥ ಸಂವಿಧಾನ. ಈ ಸಂವಿಧಾನ ಪುಸ್ತಕವನ್ನು ಪ್ರಥಮ ಬಾರಿಗೆ ವ್ಯಕ್ತಿ ಮತದಾನ ಮಾಡುವ ಸಂದರ್ಭದಲ್ಲಿ ಉಚಿತವಾಗಿ ಕೊಡುವಂತಹ ವ್ಯವಸ್ಥೆ ಆಗಬೇಕು. ಇದು ಡಾ. ಬಿ ಆರ್ ಅಂಬೇಡ್ಕರ್ ಅವರು ಮಾಡಿದಂತಹ ಜೀವನಪೂರ್ತಿ ಸೇವೆಗೆ ನಾವು ಸಲ್ಲಿಸುವಂತಹ ಚಿಕ್ಕ ಕಾಣಿಕೆ ಎಂದು ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹೇಳಿದರು.

ಅವರು ಬುಧವಾರ ತಲ್ಲೂರು ಸಮೀಪದ ಶೇಷಕೃಷ್ಣ ಸಭಾಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ರಾಜ್ಯ ಸಮಿತಿ ಆಯೋಜಿಸಿದ ಸಂವಿಧಾನ ಅರ್ಪಣಾ ದಿನದ ಸಭಾ ಕಾರ್ಯಕ್ರಮವನ್ನು ತೆಂಗಿನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಾವೆಲ್ಲರೂ ಯೋಗ್ಯ ಶಾಸಕರನ್ನು ಆಯ್ಕೆ ಮಾಡಬೇಕಾಗುತ್ತದೆ. ಒಮ್ಮೆ ನಾವು ಆಯ್ಕೆ ಮಾಡಿದ ನಂತರ ಅವರು ನಮ್ಮ ಹತೋಟಿಯಲ್ಲಿರುವುದಿಲ್ಲ. ಅವರು ಮಾಡಿದ್ದೇ ಕಾನೂನಾಗುತ್ತದೆ. ಹಾಗಾಗಬಾರದು ಎಂದರೆ ನಾವೆಲ್ಲರೂ ಸಂವಿಧಾನ ಪುಸ್ತವನ್ನು ಓದಿ ಅರ್ಥೈಸಿಕೊಳ್ಳುಬೇಕು. ನಾನು ಸಂವಿಧಾನ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದುಕೊಂಡಿದ್ದು ಕಾನೂನು ವಿದ್ಯಾಥಿಯಾದ ನಂತರವೇ. ನಿಜಕ್ಕೂ ಇಂತಹ ಕಾರ್ಯಕ್ರಮಗಳಾದಾಗ ಸಂವಿಧಾನದ ಒಂದು ಪ್ರತಿಯನ್ನು ಸಂಘಟಕರು ನೀಡಿದರೆ ಬಹಳಷ್ಟು ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ದಿನವನ್ನು ಆಚರಿಸಿದಂತಾಗುತ್ತದೆ ಎಂದು ರವಿಕಿರಣ್ ಮುರ್ಡೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.

ಭೀಮ ರತ್ನ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಈ ಭಾರತ ದೇಶದಲ್ಲಿ ಬದುಕಿ ಬಾಳುವ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸಹಬಾಳು, ಸಮಪಾಲು ಮತ್ತು ಸಹೋದರತೆಯ ಸಂದೇಶವನ್ನು, ಬದುಕಿನ ಅಸ್ತಿತ್ವವನ್ನು ಕಂಡುಕೊಳ್ಳುಲು ನೀಡಿದಂತಹ ಕಾನೂನಿನ ಪುಸ್ತಕ ಇದ್ದರೆ ಅದು ನಮ್ಮ ಸಂವಿಧಾನ ಮಾತ್ರ. ಡಾ.ಬಿಆರ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವನ್ನು, ಅದರ ಆಶಯಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಸಂ.ಸ ಭೀಮಘರ್ಜನೆಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ವಹಿಸಿದ್ದರು. ಕುಂದಾಪುರ ಕ್ಷೇತ್ರ ಶಿಕ್ಷಣಾದಿಕಾರಿ ಅರುಣ್ ಕುಮಾರ್ ಶಟ್ಟಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಿದರು. ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಬುದ್ಧವಂದನೆಯನ್ನು ನೆರವೇರಿಸಿದರು. ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಭೀಮವ್ವ ಗೌರವ ವಂದನೆಯನ್ನು ಸಲ್ಲಿಸಿದರು.

ಮುಖ್ಯಅತಿಥಿಗಳಾಗಿ ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ ವರ್ಣೇಕರ್, ಗುಲ್ವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೇಶ್ ಶೆಟ್ಟಿ, ತಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಎಸ್ ನಾಯಕ್, ವಕೀಲರಾದ ಉದಯ್ ಮಣೂರು, ಗ್ರಾಮ ಪಂಚಾಯತ್ ಸದಸ್ಯ ಸಂಜು ದೇವಾಡಿಗ, ಅಕ್ಷಯ, ರಾಧ ಕೃಷ್ಣ, ಕೃಷ್ಣ ಪೂಜಾರಿ, ಲಕ್ಷ್ಮಿ, ನಾಗರತ್ನ, ತೌಫಿಕ್ ಪಾರ್ಕರ್, ರಾಷ್ಟ್ರೀಯ ಮುಸ್ಲಿಂ ಮೊರ್ಚಾದ ರಾಜ್ಯಾಧ್ಯಕ್ಷ ನಜೀರ್ ಬೇಳುವಾಯಿ, ರಾಷ್ಟ್ರೀಯ ಮುಸ್ಲಿಂ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ರಾಜು ತರಿಕರ್, ಜಿಲ್ಲಾ ಸಂಚಾಲಕರು ಬಾಗಲಕೋಟ ಶಿವಶಂಕರ ಯಾದಗಿರಿ ಮತ್ತಿತರರು ಇದ್ದರು.

ಭೀಮಾರತ್ನ ಪ್ರಶಸ್ತಿ ಪ್ರಧಾನ:

ಯುವಜನ ಸೇವಾ ಇಲಾಖೆಯ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಬ್ರಹ್ಮಾವರ ಉಪತಹಸೀಲ್ದಾರ ರಾಘವೇಂದ್ರ ನಾಯಕ್, ದಸಂಸ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಾಯಕಿ ಪ್ರಜ್ವಲ, ರಾಜ್ಯ ನೀಲಿ ಸೇನೆಯ ಉಪಾಧ್ಯಕ್ಷ ಸದ್ದಾಂ ಹುಸೇನ್ ಅವರಿಗೆಇವರನ್ನು ಭೀಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ:
ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಾದ ಪ್ರತೀಮಾ ರಾಜಾಡಿ, ಸುಗಂಧಿ ಶೆಟಿ, ಭಾರತಿ, ಯಶೋದ, ರೇವತಿ, ಜ್ಯೋತಿ ಹಾಗೂ ಅಂಗನವಾಡಿ ಕಾರ್ಯಕರ್ತೆಯಯಾರಾದ ಜ್ಯೋತಿ, ಗೀತಾ, ಪುಷ್ಪ ಲತಾ, ಸಂಗೀತಾ, ಲಲಿತ ಹಾಗೂ ವಿದ್ಯಾರ್ಥಿಗಳಾದ ರೀನಾ ಮಿನೇಜಸ್, ರೇಹೆನಾ, ಕುಸ್ತಿ ಪಟು ಶಿವಾನಂದ ನೆಲ್ಲಿಕಟ್ಟೆ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಸಂತೋಷ್, ರಂಗಭೂಮಿಯಲ್ಲಿ ಸಾಧನೆಗೈದ ತಿಲಾಕ್‍ರಾಜ್ ಬಳ್ಕೂರ್, ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಪೂರ್ಣಿಮಾ ಪೂಜಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರು ಭೀಮಘರ್ಜನೆ ಯುಟ್ಯೂಬ್ ಚಾನೆಲ್ ಅನ್ನು ಲೋಕಾರ್ಪಣೆಗೊಳಿಸಿದರು.

ದಸಂಸ ವಸಂತ ವಂಡ್ಸೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಜುನಾಥ ಗುಡ್ಡೆಯಂಗಡಿ ಸ್ವಾಗತಿಸಿ, ವಿಜಯ್ ಕೆಎಸ್ ಧನ್ಯವಾದವಿತ್ತರು. ಸುಮಾಲತಾ ಬಜಗೋಳಿ ನಿರೂಪಿಸಿದರು. ನೀಲಿ ಸೇನೆಯ ಕಮಾಂಡರ್
ಗೌತಮ್ ಹಿಮಕರ್ ಸಹಕರಿಸಿದರು.


Spread the love