ಪ್ರಮೋದ್‌ ಮಧ್ವರಾಜ್ ಬಿಜೆಪಿ ಸೇರಲು ನಮ್ಮ ವಿರೋಧವಿಲ್ಲ – ಕುಯಿಲಾಡಿ ಸುರೇಶ್‌ ನಾಯಕ್

Spread the love

ಪ್ರಮೋದ್‌ ಮಧ್ವರಾಜ್ ಬಿಜೆಪಿ ಸೇರಲು ನಮ್ಮ ವಿರೋಧವಿಲ್ಲ – ಕುಯಿಲಾಡಿ ಸುರೇಶ್‌ ನಾಯಕ್

ಉಡುಪಿ: ಕೊನೆಗೂ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಬಿಜೆಪಿ ಮತ್ತು ಬಿಜೆಪಿ ನಾಯಕರ ಒಳ್ಳೆಯ ವಿಚಾರಗಳನ್ನು ಸ್ವೀಕಾರ ಮಾಡಲು ಪ್ರಾರಂಭಿಸಿರುವುದು ಸಂತೋಷದ ವಿಚಾರ. ಪ್ರಮೋದ್ ಬಿಜೆಪಿ ಸೇರುವುದರ ಬಗ್ಗೆ ನಮ್ಮ ವಿರೋಧವಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಸ್ಪಷ್ಟಪಡಿಸಿದರು.

ಅವರು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಮೋದ್‌ ಮಧ್ವರಾಜ್‌ ಅವರು ಇತ್ತೀಚೆಗೆ ಮೋದಿಯವರನ್ನು ಹೊಗಳಿದ ವಿಚಾರ ತಿಳಿಯಿತು. ಕೊನೆಗೂ ಅವರು ಬಿಜೆಪಿ ಮತ್ತು ಅದರ ನಾಯಕರ ಒಳ್ಳೆಯ ವಿಚಾರಗಳನ್ನು ಸ್ವೀಕಾರ ಮಾಡಿದ್ದಾರೆ. ಅವರು ಬಿಜೆಪಿಗೆ ಬರುವ ವಿಚಾರವನ್ನು ಅವರು ತೀರ್ಮಾನ ಮಾಡಬೇಕು ಆದರೆ ಅವರು ಬರಬೇಕೋ ಬೇಡವೋ ಎನ್ನುವುದರ ಕುರಿತು ನಮ್ಮ ನಾಯಕರು ಮತ್ತು ಕಾರ್ಯಕರ್ತರು ಆಲೋಚನೆ ಮಾಡುತ್ತಾರೆ.

ಬಿಜೆಪಿ ಸೇಪಡೆಯ ಕುರಿತು ಈ ಹಿಂದೆ ಎರಡು ಮೂರು ಬಾರಿ ನಮಗೆ ಕಹಿ ಅನುಭವ ಆಗಿದೆ. ದನ ಬಂದರೆ ಕರು ಬರುತ್ತೆ ಎಂದರು. ನಮಗೆ ಅವರ ಮಾನಸಿಕತೆ ಏನಿದೆ ಎನ್ನುವುದು ತಿಳಿದಿಲ್ಲ. ಅವರು ಬರುವುದಾದರೆ ನಮ್ಮ ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಬಂದರೆ ಸ್ವಾಗತ ಇದೆ. ಆದರೆ ಪ್ರತಿ ಭಾರಿ ಅವರ ಮಾನಸಿಕತೆ ಬದಲಾವಣೆ ಆದರೆ ಅದನ್ನು ನಾವು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಹಾಗಂತ ಅವರನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ಸ್ಥಳೀಯ ಹಂತದ ನಾಯಕರು ಮತ್ತು ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ವರಿಷ್ಠರು ಕೂಡ ನಿರ್ಧಾರ ಮಾಡಬೇಕಾಗಿದೆ ಎಂದು ಅವರು ಹೇಳಿದರು.


Spread the love