
Spread the love
ಪ್ರಮೋದ್ ಮಧ್ವರಾಜ್ ಎಲ್ಲೇ ಚುನಾವಣೆಗೆ ನಿಂತರೂ ಸೋಲಿಸಿ – ಡಿ ಕೆ ಶಿವಕುಮಾರ್
ಉಡುಪಿ: ಪ್ರಮೋದ್ ಮಧ್ವರಾಜ್ ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲಾ ಹುದ್ದೆ ನೀಡಿದರೂ ಕೂಡ ಪಕ್ಷಕ್ಕೆ ದ್ರೋಹ ಮಾಡಿದ್ದು ಅವರು ಯಾವುದೇ ಜಾಗದಲ್ಲಿ ಚುನಾವಣೆಗೆ ನಿಂತರೂ ಅವರನ್ನು ಸೋಲಿಸಬೇಕು ಎಂದು ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಅವರು ಉಡುಪಿ ಜಿಲ್ಲೆಯಲ್ಲಿ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿ ಪ್ರಮೋದ್ ಅವರು ಪ್ರಥಮ ಬಾರಿ ಶಾಸಕರಾದರೂ ಮಂತ್ರಿ ಮಾಡಲಾಯಿತು. ಅವರ ತಂದೆ ತಾಯಿ ಎಲ್ಲರೂ ಮಂತ್ರಿಯಾಗಲು ಕಾಂಗ್ರೆಸ್ ಕಾರಣವಾಗಿದ್ದು ಪಕ್ಷ ಅವರಿಗೆ ಇನ್ನೇನು ಮಾಡಬೇಕು. ಇಷ್ಟು ಅವಕಾಶ ನೀಡಿದರೂ ಪಕ್ಷ ದ್ರೋಹ ಮಾಡಿ ಬಿಜೆಪಿಗೆ ಹೋದರು. ಆದರೆ ಅವರೊಂದಿಗೆ ಒಬ್ಬನೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಬಿಜೆಪಿಗೆ ಹೋಗಿಲ್ಲ ಇದು ಅಭಿನಂದನೀಯ ಎಂದರು. ಅವರಿಗೆ ಬಿಜೆಪಿ ಪಕ್ಷ ಟಿಕೇಟ್ ನೀಡುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಟಿಕೇಟ್ ನೀಡಿದಲ್ಲಿ ಅವರು ಎಲ್ಲೇ ಚುನಾವಣೆಗೆ ನಿಂತರೂ ಕಾರ್ಯಕರ್ತರು ಸೇರಿಕೊಂಡು ಪ್ರಮೋದ್ ಅವರನ್ನು ಸೋಲಿಸಿ ಎಂದು ಕರೆ ನೀಡಿದರು.
Spread the love