ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಹೋಗಿ ಮೀನಿಗೆ ಗಾಳ ಹಾಕಿ ಕೂರಬೇಕು – ಡಿ ಕೆ ಶಿವಕುಮಾರ್ ವ್ಯಂಗ್ಯ

Spread the love

ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಹೋಗಿ ಮೀನಿಗೆ ಗಾಳ ಹಾಕಿ ಕೂರಬೇಕು – ಡಿ ಕೆ ಶಿವಕುಮಾರ್ ವ್ಯಂಗ್ಯ

ಬೈಂದೂರು: ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರಿದರೂ ಎನೂ ಸಿಕ್ಕಿಲ್ಲ ಹಾಗಾಗಿ ಅವರು ಮೀನಿಗೆ ಗಾಳ ಹಾಕಿಕೊಂಡು ಕೂರಬೇಕು ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವ್ಯಂಗವಾಡಿದ್ದಾರೆ.

ಬೈಂದೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬೇಡ ಬೇಡ ಎಂದು ಹೇಳಿದರೂ ಕೂಡ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಿದರು ಆದರೆ ಅವರಿಗೆ ಅಲ್ಲಿ ಏನೂ ಸಿಕ್ಕಿಲ್ಲ. ಕನಿಷ್ಠ ಪಕ್ಷ ಮಧ್ವರಾಜ್ ಗೆ ಬಿಜೆಪಿ ವೇದಿಕೆಯಲ್ಲಿ ಕೂತ್ಕೋಳೋ ಅವಕಾಶನೂ ಸಿಕ್ಕಿಲ್ಲ ಹಾಗಾಗಿ ಮಧ್ವರಾಜ್ ಮೀನಿಗೆ ಗಾಳ ಹಾಕ್ತಾ ಕೂತ್ಕೋಬೇಕಷ್ಟೇ. ಅವರು ಎಂಎಲ್ ಸಿ ಆಗೋ ಆಸೆಯನ್ನು ಬಿಟ್ ಬಿಡೋದು ಒಳ್ಳೇದು. ಮಧ್ವರಾಜ್ ಬಿಜೆಪಿಗೆ ಹೋದರೂ ಅವರ ಜೊತೆ ಒಬ್ಬನೇ ಒಬ್ಬ ಕಾರ್ಯಕರ್ತ ಕೂಡ ಹೋಗಿಲ್ಲ ಅದಕ್ಕಾಗಿ ನಾನು ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.


Spread the love