ಪ್ರಯಾಣಿಕರ ಲಗೇಜ್ ದುಬೈಯಲ್ಲೇ ಬಿಟ್ಟು ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ !
ಶನಿವಾರ ಸಂಜೆ ದುಬೈಯಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಹಲವು ಪ್ರಯಾಣಿಕರ ಲಗೇಜ್‌ಗಳನ್ನು ದುಬೈಯಲ್ಲೇ ಬಿಟ್ಟು ಬಂದಿರುವುದು ವರದಿಯಾಗಿದೆ.
ವಿಮಾನ ಮಂಗಳೂರಿಗೆ ಬಂದು ಇಳಿದ ನಂತರ ಪ್ರಯಾಣಿಕರು ತಮ್ಮ ಲಗೇಜು ಪಡೆಯಲು ಬಂದಾಗಲೇ ಅವರಿಗೆ ನಿಮ್ಮ ಲಗೇಜು ದುಬೈಯಿಂದ ಲೋಡ್ ಆಗಿಲ್ವ ವಿಮಾನ ಫುಲ್ ಇದ್ದುದರಿಂದ ಕೆಲವು ಲಗೇಜ್‌ಗಳನ್ನು ಅಲ್ಲೇ ಬಿಡಲಾಗಿದೆ, ನಿಮಗೆ ನಾವು ನಾಳೆ ಬೆಳಗ್ಗೆ 5 ಗಂಟೆಗೆ ಬರುವ ವಿಮಾನದಲ್ಲಿ ಆ ಲಗೇಜ್ ದುಬೈಯಿಂದ ಬರಲಿದೆ ಅದನ್ನು ನಿಮಗೆ ತಲುಪಿಸುತ್ತೇವೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.