ಪ್ರವಾಸಿಗರ ಆಕರ್ಷಿಸುವ ಮೈಸೂರಿನ ವ್ಯಾಕ್ಸ್ ಮ್ಯೂಸಿಯಂ

????????????????????????????????????
Spread the love

ಪ್ರವಾಸಿಗರ ಆಕರ್ಷಿಸುವ ಮೈಸೂರಿನ ವ್ಯಾಕ್ಸ್ ಮ್ಯೂಸಿಯಂ

ಈಗಾಗಲೇ ಮೈಸೂರಿಗೆ ದೌಡಾಯಿಸಿರುವ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಿಗೆ ಲಗ್ಗೆಯಿಡುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ರವಾಸಿಗರ ದಂಡು ಕಾಣಿಸುತ್ತಿದೆ. ದಸರಾ ಕಳೆದರೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ಬಹಳಷ್ಟು ಪ್ರವಾಸಿಗರ ಮೈಸೂರಿನಲ್ಲಿರುವ ಕೆಲವೇ ಕೆಲವು ಪ್ರವಾಸಿ ತಾಣಗಳನ್ನಷ್ಟೆ ನೋಡಿಕೊಂಡು ಹಿಂತಿರುಗುತ್ತಿದ್ದಾರೆ. ಆದರೆ ಇಲ್ಲಿ ನೋಡತಕ್ಕ ಹಲವಾರು ಪ್ರವಾಸಿ ತಾಣಗಳು ಇವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

 
 
 
 
 

ಈಗಾಗಲೇ ಪ್ರವಾಸಿಗರ ಸೆಳೆದಿರುವ ಪ್ರವಾಸಿ ತಾಣಗಳ ನಡುವೆ ಇರುವ ವ್ಯಾಕ್ಸ್ ಮ್ಯೂಸಿಯಂ ಕೂಡ ನೋಡಲು ಅರ್ಹ ತಾಣವಾಗಿದ್ದು ಪ್ರವಾಸಿಗರು ಭೇಟಿ ನೀಡಬಹುದಾಗಿದೆ.

ನಗರದ ರೇಸ್‌ಕೋರ್ಸ್ ಹಿಂಭಾಗದಲ್ಲಿ ತಲೆಎತ್ತಿರುವ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಹಲವು ವಿಶೇಷತೆಗಳನ್ನು ತನ್ನೊಳಗೆ ಹುದುಗಿಸಿಕೊಂಡು ಎಲ್ಲರ ಗಮನಸೆಳೆಯುತ್ತದೆ. ಈ ಮ್ಯೂಸಿಯಂನ ರೂವಾರಿ ಹೊನ್ನಾವರದವರಾದ ಕಲಾವಿದ, ಕಲಾ ಶಿಕ್ಷಕ ಉಮೇಶ್ ಶೆಟ್ಟಿಯವರರಾಗಿದ್ದು, ಇವರೊಂದಿಗೆ ಇನ್ನೂ ಏಳುಮಂದಿ ಸಾಥ್ ನೀಡಿದ್ದು, ಉಮೇಶ್ ಶೆಟ್ಟಿಯವರ ಕಲ್ಪನೆ, ಕನಸು, ಪ್ರತಿಭೆ, ಶ್ರಮ ಎಲ್ಲವೂ ಸೇರಿ ಇಲ್ಲಿ ವ್ಯಾಕ್ಸ್ ಮ್ಯೂಸಿಯಂ ಆಗಿ ರೂಪತಾಳಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಅವರಿಗೆ ಈ ಮ್ಯೂಸಿಯಂ ನಿರ್ಮಾಣಕ್ಕೆ ಲಂಡನ್‌ನ ವ್ಯಾಕ್ಸ್ ಮ್ಯೂಸಿಯಂ ಸ್ಫೂರ್ತಿಯಂತೆ. ಬಹಳಷ್ಟು ವರ್ಷಗಳಿಂದ ಕರ್ನಾಟಕದಲ್ಲಿಯೂ ವ್ಯಾಕ್ಸ್ ಮ್ಯೂಸಿಯಂ ಮಾಡಬೇಕೆನ್ನುವ ಅವರ ಕನಸಿಗೆ ಮತ್ತು ಎಲ್ಲಿ ಮಾಡಿದರೆ ಸೂಕ್ತ ಎನ್ನುವ ಆಲೋಚನೆ ಬಂದಾಗ ನೆನಪಾಗಿದ್ದೇ ಮೈಸೂರು. ಇಲ್ಲಿಯ ವಾತಾವರಣ ಮತ್ತು ಪ್ರವಾಸಿಗರು ಬರುವ ಸ್ಥಳವಾಗಿರುವುದರಿಂದ ತಮ್ಮ ಶ್ರಮಕ್ಕೂ ಸಾರ್ಥಕತೆ ಸಿಗುತ್ತದೆ ಎಂದು ಆಲೋಚಿಸಿ ಮ್ಯೂಸಿಯಂ ನಿರ್ಮಾಣ ಮಾಡಿದ್ದಾರೆ.

ಪ್ರಶಾಂತ ಸ್ಥಳದಲ್ಲಿ ಸುಮಾರು 6ಸಾವಿರ ಚದರ ಅಡಿ ಪ್ರದೇಶದಲ್ಲಿ ಮ್ಯೂಸಿಯಂನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಹಾನ್ ನಾಯಕರ ಮೇಣದ ಪ್ರತಿಮೆಗಳು ಅದ್ಭುತವಾಗಿ ಮೂಡಿ ಬಂದಿವೆ. ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆಯಿಂದ ಆರಂಭವಾಗಿ ಪ್ರಧಾನ ಮಂತ್ರಿಮೋದಿಯಾದಿಯಾಗಿ ಮಿಸ್ಟರ್ ಬೀನ್ ತನಕ ಹಲವರು ಇಲ್ಲಿ ಸ್ಥಾನಪಡೆದಿದ್ದಾರೆ.

ಇಲ್ಲಿ ಐದು ಅಡಿ ಎತ್ತರದ ಮದರ್ ತೆರೇಸಾ ರಿಂದ ಆರಂಭವಾಗಿ 7.2 ಅಡಿ ಎತ್ತರದ ಅಜಾನುಬಾಹು ಗ್ರೇಟ್ ಕಲಿವರೆಗೆ ದೇಶ ವಿದೇಶಗಳ ಮಹಾನ್ ವ್ಯಕ್ತಿಗಳು ಮೇಣದ ಪ್ರತಿಮೆಯಲ್ಲಿ ನಗೆ ಬೀರುತ್ತಾರೆ. ಇನ್ನು ರಾಘವೇಂದ್ರ ಸ್ವಾಮಿ, ಸಾಯಿಬಾಬಾ, ಸ್ವಾಮಿ ವಿವೇಕಾನಂದ, ಗುರುನಾನಕ್, ಅಡಾಲ್ಫ್ ಹಿಟ್ಲರ್, ಮೈಕೆಲ್ ಜಾನ್ಸನ್, ಮಹಾತ್ಮ ಗಾಂಧಿ, ರವೀಂದ್ರನಾಥ್ ಟ್ಯಾಗೂರ್, ಭಗತ್ ಸಿಂಗ್, ಮೊನಲಿಸಾ, ಕಲ್ಪನಾಚಾವ್ಲಾ ರಾಜಕೀಯ ಚಾಣಕ್ಯ ಅಮಿತ್ ಶಾ ಹೀಗೆ ಹಲವು ಮಂದಿಯ ಪ್ರತಿಮೆ ಇಲ್ಲಿದೆ. ಒಟ್ಟಾರೆ ಈ ಮ್ಯೂಸಿಯಂ ಕೂಡ ಹಲವು ವಿಶೇಷತೆಗಳನ್ನು ಹೊಂದಿರುವುದರಿಂದ ಪ್ರವಾಸಿಗರು ಭೇಟಿ ನೀಡಿ ಹಲವು ನಾಯಕರ ಮೇಣದ ಪ್ರತಿಮೆ ಜತೆ ಸೆಲ್ಫಿ ತೆಗೆದುಕೊಂಡು ತೆರಳಬಹುದಾಗಿದೆ.


Spread the love

1 Comment

Comments are closed.