
ಪ್ರವಾಸಿ ತಾಣಗಳಲ್ಲಿ ನಿಯಮ ಮೀರಿದರೆ ಕಠಿಣ ಕ್ರಮ – ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಎಚ್ಚರಿಕೆ
ಉಡುಪಿ: ಮಳೆಗಾಲದಲ್ಲಿ ನಿಯಮ ಮೀರಿ ಅಪಾಯಕಾರಿಯಾಗಿರುವ ನದಿ, ಸಮುದ್ರ, ಜಲಪಾತದಂತಹ ಪ್ರದೇಶಗಳಲ್ಲಿ ನಿರ್ಲಕ್ಷತೆಯಿಂದ ನಿಯಮ ಮೀರಿ, ಮೋಜು ಮಸ್ತಿಯನ್ನು ಮಾಡುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ಸಾಲಿನ ಮುಂಗಾರು ಮಳೆಯಿಂದಾಗಿ ಉಂಟಾಗಬಹುದಾದ ಜನರ ಜೀವ , ಆಸ್ತಿ-ಪಾಸ್ತಿ ಹಾಗೂ ಜಾನುವಾರುಗಳ ಜೀವ ಹಾನಿಯಂತಹ ಅನಾಹುತಗಳನ್ನು ತಪ್ಪಿಸಲು ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು ಈ ಹಿನ್ನಲೆಯಲ್ಲಿ ನದಿ ತೀರ , ಸಮುದ್ರ ತೀರ, ಜಲಪಾತಗಳಂತಹ ಪ್ರವಾಸಿಗರು ಸಾಮಾನ್ಯವಾಗಿ ಭೇಟಿ ನೀಡುವಂತಹ ಪ್ರೇಕ್ಷಣೀಯ ಸ್ಧಳಗಳಲ್ಲಿ ಜನರು ಅಗತ್ಯ ಮುಂಜಾಗೃತೆಯನ್ನು ವಹಿಸಿದೇ ಅಪಾಯಕ್ಕೆ ಒಳಗಾಗುವುದರಿಂದ ಅಂತಹ ಪ್ರದೇಶಗಳಲ್ಲಿ ಅಪಾಯದ ಕುರಿತು ಜನರ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ಎಚ್ಚರಿಕೆ ಫಲಕ, ಪೊಲೀಸ್ ಕಾವಲು, ಮತ್ತಿತ್ತರ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿರುತ್ತದೆ.
ಅದಾಗ್ಯೂ ಸಾರ್ವಜನಿಕರು ಮಳೆಗಾಲದಲ್ಲಿ ಅಪಾಯಕಾರಿಯಾಗಿರುವ ನದಿ, ಸಮುದ್ರ, ಜಲಪಾತದಂತಹ ಪ್ರದೇಶಗಳಲ್ಲಿ ನಿರ್ಲಕ್ಷತೆಯಿಂದ ನಿಯಮ ಮೀರಿ, ಮೋಜು ಮಸ್ತಿಯನ್ನು ಮಾಡುವುದು ಕಂಡುಬಂದಲ್ಲಿ, ಅಂತಹ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ .