ಪ್ರವಾಸೋದ್ಯಮಕ್ಕೆ ಉತ್ತೇಜನ: ಕೆಮ್ಮಣ್ಣು ಬೋಟ್ ಹೌಸ್ ನಲ್ಲಿ ಬೋಟ್ ಚಲಾಯಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್!

Spread the love

ಕೆಮ್ಮಣ್ಣು ಬೋಟ್ ಹೌಸ್ ನಲ್ಲಿ ಬೋಟ್ ಚಲಾಯಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್!

ಉಡುಪಿ: ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಜಾದಿನವಾಗಿರುವ ಭಾನುವಾರವನ್ನು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ತನ್ನ ಕುಟುಂಬದೊಂದಿಗೆ ಕೆಮ್ಮಣ್ಣು ಹೂಡೆಯಲ್ಲಿರುವ ಬೋಟ್ ಹೌಸ್ ನಲ್ಲಿ ಪ್ರಯಾಣ ಮಾಡುವದರ ಮೂಲಕ ಕಳೆದರು.

ಭಾನುವಾರ ಬೆಳಿಗ್ಗೆ ತಮ್ಮ ಕುಟುಂಬದೊಂದಿಗೆ ಕೆಮ್ಮಣ್ಣು ಹೂಡೆಯಲ್ಲಿರುವ ಬೋಟ್ ಹೌಸ್ ಗೆ ಸಮಯ ಕಳೆಯುವ ನಿಟ್ಟಿನಲ್ಲಿ ಆಗಮಿಸಿದ್ದು, ಕೆಲಕಾಲ ಬೋಟ್ ಚಲಾಯಿಸುವ ಮೂಲಕ ಗಮನ ಸೆಳೆದರು.

ಬೋಟು ಚಾಲಕನ ನಿರ್ದೇಶನದಂತೆ ಡಿಸಿ ಕೆಲವು ದೂರ ಬೋಟು ಚಾಲನೆ ಮಾಡುವ ಮೂಲಕ ಗಮನ ಸೆಳೆದರು. ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಡಿಸಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.


Spread the love