ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ಆರೋಪಿಗಳ ಶರಣಾಗತಿಗೆ ಮತ್ತೊಂದು ಗಡುವು!

Spread the love

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ಆರೋಪಿಗಳ ಶರಣಾಗತಿಗೆ ಮತ್ತೊಂದು ಗಡುವು!

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಶರಣಾಗತಿಗೆ ಮತ್ತೊಂದು ಗಡುವನ್ನು ಎನ್ಐಎ ಅಧಿಕಾರಿಗಳು ನೀಡಿದ್ದು, ಆರೋಪಿಗಳ ಮನೆಗಳಿಗೆ ನೋಟಿಸ್‌ ಅಂಟಿಸಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆಗೆ ಅಂಟಿಸಿದ ತಿಂಗಳ ಈಚೆಗೆ ಅಂಟಿಸಿದ ಎರಡನೇ ನೋಟಿಸ್‌ ಇದಾಗಿದೆ.

ಪ್ರಕರಣದ ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಮೊಹಮ್ಮದ್‌ ಮುಸ್ತಾಫ ಎಸ್‌. ಹಾಗೂ ಸುಳ್ಯ ಕಲ್ಲುಮುಟ್ಟು ಮನೆಯ ಉಮ್ಮರ್‌ ಫಾರೂಕ್‌ ತಲೆ ಮರೆಸಿಕೊಂಡಿದ್ದು, ಅವರ ಮನೆಗಳಿಗೆ ಎನ್‌ಐಎ ಅಧಿಕಾರಿಗಳು 2023ರ ಜೂನ್‌ ತಿಂಗಳಿನಲ್ಲೂ ನೋಟಿಸಿ ಅಂಟಿಸಿದ್ದರು. ಜೂನ್‌ 30ರ ಒಳಗೆ ಶರಣಾಗುವಂತೆ ಗಡುವು ವಿಧಿಸಿದ್ದರು. ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನ ನೀಡಲಾಗುವುದು ಎಂದು ಸುಳ್ಯ ಹಾಗೂ ಬೆಳ್ಳಾರೆ ಪಟ್ಟಣಗಳಲ್ಲಿ ಧ್ವನಿವರ್ಧಕ ಬಳಸಿಯೂ ಪ್ರಚಾರ ಮಾಡಿದ್ದರು.


Spread the love