
Spread the love
ಪ್ರಿಯಾಂಕ ಖರ್ಗೆಯವರಿಗೆ ಕಾನೂನಿನ ಅರಿವು ಇಲ್ಲ: ಯಶ್ಪಾಲ್ ಸುವರ್ಣ
ಉಡುಪಿ: ಪಿಎಫ್ ಐ ಸಂಘಟನೆ ದೇಶ ದ್ರೋಹಿ ಕೆಲಸ ಮಾಡುವದನ್ನು ಕೇಂದ್ರ ಸರ್ಕಾರ ಮಾಹಿತಿ ಪಡೆದು ಬ್ಯಾನ್ ಮಾಡಿದೆ. ಭಜರಂಗದಳ, ಅರ್ ಎಸ್ ಎಸ್ ದೇಶದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದೆ. ಆದರೆ ಕಾಂಗ್ರೆಸ್ ನಾಯಕರು ಕಾನೂನಿನ ಅರಿವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಖಾಸಗಿ ಟಿವಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆಯವರಿಗೆ ಕಾನೂನಿನ ಅರಿವು ಇಲ್ಲ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಭಜರಂಗದಳ ನಿಷೇಧ ಮಾಡುವುದು ಕಾಂಗ್ರೆಸ್ ನ ಕನಸು ಅದು ನನಸು ಆಗುವುದಿಲ್ಲ. 2024 ರ ಚುನಾವಣೆಯಲ್ಲಿ ಈ ರೀತಿಯ ಹೇಳಿಕೆಗಳಿಗೆ ಸರಿಯಾದ ಉತ್ತರ ಕೊಡುತ್ತಾರೆ ಎಂದರು.
Spread the love