ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆಗೆ ಸಂಕಲ್ಪ: ಡಾ.ನಾಗರಾಜು

Spread the love

ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆಗೆ ಸಂಕಲ್ಪ: ಡಾ.ನಾಗರಾಜು

ಮೈಸೂರು: ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆಗೆ ಜನ ಸಂಕಲ್ಪ ಮಾಡಬೇಕೆಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಕರೆ ನೀಡಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ವತಿಯಿಂದ ಮಂಡಿ ಮೊಹಲ್ಲಾದ ಚಿಕ್ಕ ಮಾರ್ಕೆಟ್ ಹಾಗೂ ಸುತ್ತಮುತ್ತ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧದ ಬಗ್ಗೆ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಸರಾದ ವೇಳೆ ವ್ಯಾಪಾರಸ್ಥರು ಮತ್ತು ಗ್ರಾಹಕರು ಪ್ಲಾಸ್ಟಿಕ್ ತ್ಯಜಿಸಿ ಆರೋಗ್ಯವಂತ ಮೈಸೂರು ನಿರ್ಮಾಣದ ಕಡೆ ಕೈಜೋಡಿಸಬೇಕೆಂದು ಹೇಳಿದರು.

ಮೈಸೂರಿನಲ್ಲಿ ಪಾರಂಪರಿಕೆ ಕೆರೆಗಳು, ಉದ್ಯಾನವನಗು ದೊಡ್ಡಮರಗಳು ಕಾಣುತ್ತವೆ ಎಂದರೆ ಮೈಸೂರು ರಾಜರ ಕೊಡುಗೆ, ಪ್ಲಾಸ್ಟಿಕ್ ಬಳಕೆ ಮೇಲೆ ನಾವು ಅವಂಲಂಬಿತರಾದರೆ ಖಾಯಿಲೆಯನ್ನು ಉಚಿತವಾಗಿ ಪಡೆದಂತೆ ಹಾಗಾಗಿ ವ್ಯಾಪಾರಸ್ಥರು ಪ್ಲಾಸ್ಟಿಕ್ ಮಾರಾಟ ನಿಲ್ಲಿಸಬೇಕು. ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿ ವಿಶ್ವವಿಖ್ಯಾತವಾಗಿದೆ ಕೋಟ್ಯಂತರ ಮಂದಿ ದೇಶವಿದೇಶದಿಂದ ಬರುತ್ತಾರೆ ಇಂದಿಗೂ ಪಾರಂಪರಿಕತೆ ಹಸಿರು ಹೆಚ್ಚಿರುವ ಮೈಸೂರು ದೇಶದ ಸ್ವಚ್ಛನಗರಿಯಾಗಿ ಬಿರುದು ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ಇಂದು ಪ್ಲಾಸ್ಟಿಕ್ ಬಳಕೆ ರಸ್ತೆಬದಿಯಿಂದ ಶಾಪಿಂಗ್ ಮಾಲ್ ವರೆಗೂ ಅವಲಂಬಿತವಾಗಿದೆ ಆದ್ಧರಿಂದ ಮಾರಣಾಂತಿಕ ಕಾಯಿಲೆ ಬರುತ್ತದೆ ಮತ್ತು ಪ್ಲಾಸ್ಟಿಕ್ ವ್ಯಾಜ್ಯವಾಗಿ ಕರಗಲು 500ವರ್ಷಗಳು ಬೇಕು ಇದು ಪರಿಸರ ನೀತಿಯ ವಿರುದ್ಧ ಅಸಮತೋಲನವಾಗಿದೆ, ನಗರಪಾಲಿಕೆಯೂ ಸಹ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸುತ್ತ ಬಂದಿದ್ದೇವೆ ಎಂದರು.

ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಮಂಡಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ವಿಶ್ವನಾಥ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸುಚೀಂದ್ರ, ಸದಾಶಿವ, ಸ್ಥಳೀಯ ಆರೋಗ್ಯ ನಿರೀಕ್ಷಕರು ಬಸವರಾಜು, ಸುಬ್ರಹ್ಮಣ್ಯ, ಕೇಬಲ್ ವಿಜಿ, ಕಿರಣ್, ಚಂದ್ರ, ರಾಜು ಹಾಗೂ ಇನ್ನಿತರರು ಇದ್ದರು.

 


Spread the love

Leave a Reply

Please enter your comment!
Please enter your name here