ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲಕನ ಮೇಲೆ ತಲವಾರು ದಾಳಿ

Spread the love

ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲಕನ ಮೇಲೆ ತಲವಾರು ದಾಳಿ

ಬಂಟ್ವಾಳ: ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಫೋಟೋಗ್ರಾಫರ್ ಒಬ್ಬರ ಮೇಲೆ ತಲವಾರು ದಾಳಿ ನಡೆಸಿದ ಘಟನೆ ಬುಧವಾರ ರಾತ್ರಿ ಫರಂಗಿಪೇಟೆಯಲ್ಲಿ ನಡೆದಿದೆ.

ದಾಳಿಗೆ ಒಳಗಾಗದ ವ್ಯಕ್ತಿಯನ್ನು ಫರಂಗಿಪೇಟೆಯ ಸ್ಟೂಡಿಯೊವೊಂದರ ಮಾಲಕ ದಿನೇಶ್ ಕೊಟ್ಟಿಂಜ ಎಂದು ಗುರುತಿಸಲಾಗಿದೆ.

ದಿನೇಶ್ ಕೊಟ್ಟಿಂಜ ಮೇಲೆ ಅಪರಿಚಿತ ವ್ಯಕ್ತಿಗಳು ರಾತ್ರಿ ತಲವಾರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ದಿನೇಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ ವೆಲೆಂಟೈನ್ ಡಿ ಸೋಜ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಎಸ್. ಐ.ಪ್ರಸನ್ನ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.


Spread the love