ಫಾತಿಮತ್ ನಿಶಾನಾ ಅನುಮಾನಾಸ್ಪದ ಸಾವು ಪ್ರಕರಣ: ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ₹3 ಲಕ್ಷ ಮಂಜೂರು
ಪುತ್ತೂರು : ಜುಲೈ 18 ರಂದು ತನ್ನ ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಕೆದಂಬಾಡಿ ಗ್ರಾಮದ ಸಾರೆಪುಣಿ ನಿವಾಸಿ ಫಾತಿಮತ್ ನಿಶಾನ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3 ಲಕ್ಷ ಮಂಜೂರುಗೊಳಿಸಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದ ಶಾಸಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆಯೂ ಮನವಿ ಮಾಡಿದರು. ನಿಶಾನಾ ಳ ಕುಟುಂಬ ಆರ್ಥಿಕವಾಗಿ ತೀರಾ ಬಡವರಾಗಿದ್ದು ಮೃತಳಿಗೆ ಮೂರು ವರ್ಷ ಪ್ರಾಯದ ಮಗುವಿದ್ದು ,ಕುಟುಂಬ ನೊಂದುಕೊಂಡಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಶಾಸಕರ ಮನವಿಯ ಮೇರೆಗೆ ಸಿ ಎಂ ಅವರು ಮೂರು ಲಕ್ಷ ಪರಿಹಾರ ಮೊತ್ತವನ್ನು ಮಂಜೂರುಗೊಳಿಸಿದ್ದು ಕೆಲವೇ ದಿನಗಳಲ್ಲಿ ಈ ಮೊತ್ತ ನಿಶಾನ ಕುಟುಂಬದ ಖಾತೆಗೆ ಜಮೆಯಾಗಲಿದೆ.
