
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ 38 ನೇ ಬ್ಯಾಚ್ ಬಿ.ಎಚ್.ಎಮ್.ಎಸ್ ಕೋರ್ಸ್ ಉದ್ಘಾಟನಾ ಸಮಾರಂಭ
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯಕಾಲೇಜಿನ38ನೇ ಬ್ಯಾಚ್‍ಬಿ.ಎಚ್.ಎಮ್.ಎಸ್‍ಕೋರ್ಸ್‍ನ್ನು ದಿನಾಂಕ10.03.2023ರಂದು ಬೆಳಿಗ್ಗೆ 10.30ಗಂಟೆಗೆಕಾಲೇಜಿನ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಾರದಕೃಷ್ಣ ಹೋಮಿಯೋಪಥಿಮೆಡಿಕಲ್‍ಕಾಲೇಜ್, ಕುಲಸೇಕರ, ಕನ್ಯಕುಮಾರಿಇಲ್ಲಿನ ಮೆಟಿರಿಯಾ ಮೆಡಿಕಾ ವಿಭಾಗದ ಪ್ರಾಧ್ಯಾಪಕರು ಹಾಗೂ ಸ್ನಾತಕೋತ್ತರ ಕೋರ್ಸ್‍ಗಳ ಸಂಯೋಜಕರಾದಡಾ. ವಿನ್‍ಸ್ಟನ್ ವರ್ಗೀಸ್ ವಿ.,ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದವಂದನೀಯರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯರೋಶನ್‍ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಉಪಪ್ರಾಂಶುಪಾಲರಾದಡಾ. ವಿಲ್ಮಾ ಮೀರಾ ಡಿ’ಸೋಜ,ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯಆಸ್ಪತ್ರೆಯವೈದ್ಯಕೀಯಅಧೀಕ್ಷಕರಾದಡಾ.ಗಿರೀಶ್ ನಾವಡಯು.ಕೆ, ಯು.ಜಿ.ಶೈಕ್ಷಣಿಕಉಸ್ತುವಾರಿಡಾ.ಜಸಿಂತಾ ಮೊಂತೆರೋಹಾಗೂ ಹೊಸ ಬ್ಯಾಚ್‍ನ ವಿದ್ಯಾರ್ಥಿ ಪ್ರತಿನಿಧಿಉದ್ಘಾಟನಾ ಸಮಾರಂಭದಲ್ಲಿಭಾಗವಹಿಸಿದರು.
ಕಾಲೇಜಿನಉಪಪ್ರಾಂಶುಪಾಲರಾದಡಾ.ವಿಲ್ಮಾ ಮೀರಾ ಡಿ’ಸೋಜರವರು ನೆರೆದಿರುವಎಲ್ಲರನ್ನು ಸ್ವಾಗತಿಸಿಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.ಮುಖ್ಯ ಅತಿಥಿಗಳಾದ ಡಾ.ವಿನ್‍ಸ್ಟನ್ ವರ್ಗೀಸ್‍ರವರುತಮ್ಮ ಸಂದೇಶದಲ್ಲಿಮಾನವರದು:ಖವನ್ನು ನಿವಾರಿಸುವಗುರಿಯನ್ನು ಹೊಂದಿರುವಸುರಕ್ಷಿತ, ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತುಕಡಿಮೆ ವೆಚ್ಚದಾಯಕವಾದ ಸಮಗ್ರ ವೈದ್ಯಕೀಯ ವೃತ್ತಿಯನ್ನುಆಯ್ಕೆಮಾಡಿರುವುದು ವಿದ್ಯಾರ್ಥಿಗಳ ಅದ್ರಷ್ಟವೆಂದು ಹೇಳಿದರು. ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಹಾಗೂ ವೈಯುಕ್ತಿಕ ಬೆಳವಣಿಗೆಗೆ ಫಾದರ್ ಮುಲ್ಲರ್‍ಹೋಮಿಯೋಪಥಿ ಸಂಸ್ಥೆಯಿಂದದೊರೆತ ಪೆÇ್ರೀತ್ಸಾಹವನ್ನು ವಿವರಿಸುತ್ತಾ ಫಾದರ್‍ಅಗಸ್ಟಸ್ ಮುಲ್ಲರ್, ಡಾ. ಸ್ಯಾಮುವೆಲ್ ಹಾನ್ನಿಮನ್ ಮತ್ತು ಹೋಮಿಯೋಪಥಿಯಇತರ ದಿಗ್ಗಜರೊಂದಿಗೆ ಸಂಬಂಧ ಹೊಂದಿದ್ದು ಮಹತ್ವದಇತಿಹಾಸ ಮತ್ತು ಪರಂಪರೆಇರುವಫಾದರ್ ಮುಲ್ಲರ್ ಸಂಸ್ಥೆಯನ್ನುತಮ್ಮ ವೈದ್ಯಕೀಯ ಶಿಕ್ಷಣಕ್ಕೆ ಆರಿಸಿಕೊಂಡಿದಕ್ಕಾಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಆಡಳಿತಾದಿಕಾರಿಯಾದ ವಂದನೀಯರೋಶನ್‍ಕ್ರಾಸ್ತಾರವರುಗುಣಮಟ್ಟದ ಮತ್ತು ಸಂಶೋಧನೆಯಕ್ಷೇತ್ರದಲ್ಲಿ ಪ್ರವರ್ತಕ ಸಂಸ್ಥೆಯಾಗಿರುವ ಫಾದರ್ ಮುಲ್ಲರ್ ಸಂಸ್ಥೆಯನ್ನುಆಯ್ಕೆ ಮಾಡಿರುವವಿದ್ಯಾರ್ಥಿಗಳನ್ನುಅಭಿನಂದಿಸಿ, ವಿದ್ಯಾರ್ಥಿಗಳು ನಿರಂತರವಾಗಿ ಬದಲಾಗುತ್ತಿರುವಆಧುನಿಕಜಗತ್ತಿಗೆ ಹೊಂದಿಕೆಯಾಗಬೇಕು, ಜ್ಞಾನದಿಂದ ನವೀಕರಿಸಬೇಕು ಮತ್ತುಗುಣಮಟ್ಟದ ಶಿಕ್ಷಣ ಹಾಗೂಕ್ಲಿನಿಕಲ್‍ಅನುಭವದ ಮೂಲಕ ಸಮರ್ಥ ಹೋಮಿಯೋಪಥಿಗಳಾಗಬೇಕೆಂದು ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಿದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದವಂದನೀಯರಿಚರ್ಡ್ ಅಲೋಶಿಯಸ್ ಕುವೆಲ್ಲೊರವರುತಮ್ಮಅಧ್ಯಕ್ಷೀಯ ಭಾಷಣದಲ್ಲಿ ಹೊಸವಿದ್ಯಾರ್ಥಿಗಳನ್ನು ಫಾದರ್ ಮುಲ್ಲರ್ ಸಂಸ್ಥೆಗೆ ಸ್ವಾಗತಿಸಿ ವಿದ್ಯಾರ್ಥಿಗಳು ಏಕಾಗ್ರತೆಹಾಗೂಸ್ವಯಂ ಶಿಸ್ತಿನ ಮೂಲಕಯಶಸ್ವಿ ಹೋಮಿಯೋಪಥಿ ವೈದ್ಯರಾಗಬೇಕೆಂದು ಒತ್ತಾಯಿಸಿದರು.
ಶೈಕ್ಷಣಿಕಉಸ್ತುವಾರಿಡಾ.ಜಸಿಂತಾ ಮೊಂತೆರೋರವರುಧನ್ಯವಾದ ಸಮರ್ಪಿಸಿದರು.ಸಂಸ್ಥೆಯಗೀತೆಯೊಂದಿಗೆಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಡಾ. ಅನುಷ ಜಿ. ಸನಿಲ್‍ರವರುಕಾರ್ಯಕ್ರಮವನ್ನು ನಿರೂಪಿಸಿದರು.