ಫಾರ್ಮ್‌ ಹೌಸ್‌ ನ ಕೆರೆಯಲ್ಲಿ ಮುಳುಗಿ ಯುವತಿ ಮೃತ್ಯು

Spread the love

ಫಾರ್ಮ್‌ ಹೌಸ್‌ ನ ಕೆರೆಯಲ್ಲಿ ಮುಳುಗಿ ಯುವತಿ ಮೃತ್ಯು

ಮಂಗಳೂರು: ಫಾರ್ಮ್‌ ಹೌಸ್‌ ನ ಕೆರೆಯಲ್ಲಿ ಈಜಲು ಹೋಗಿ ಮಹಿಳೆಯೋರ್ವರು ನೀರಿನಲ್ಲಿ ಮುಳುಗಿ ಮೃತಪಟ್ಠ ಘಟನೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ವಾರಣಾಸಿ ಎಂಬಲ್ಲಿ ಬಳಿ ಸಂಭವಿಸಿದೆ.

ಮೃತರನ್ನು ಮೈಜಿ ಕೆರೋಲ್‌ ಫೆರ್ನಾಂಡಿಸ್‌ (31) ಎಂದು ಗುರುತಿಸಲಾಗಿದೆ.

ಮೈಜಿ ಕೆರೋಲ್‌ ಫೆರ್ನಾಂಡಿಸ್‌ ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಕೃಷಿ ಅದ್ಯಯನದ ಬಗ್ಗೆ ಆಸಕ್ತಿಯನ್ನು ಹೊಂದಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ವಾರಣಾಸಿ ಪಾರ್ಮ್ ಹೌಸ್‌ನಲ್ಲಿ ಸೆಪ್ಟೆಂಬರ್‌ 12 ರಿಂದ ಅಧ್ಯಯನ ಮಾಡುತ್ತಿದ್ದು ಸೆ. 14 ರಂದು ಸಂಜೆ ಪಾರ್ಮ ಹೌಸನಲ್ಲಿದ್ದ ಕೆರೆಯಲ್ಲಿ ಈಜಲು ಹೋಗಿದವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಕೂಡಲೇ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಮಂಗಳೂರಿನ ಪಾದರ್‌ ಮುಲ್ಲರ ಆಸ್ವತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply