ಫುಟ್ ಬೋರ್ಡ್ ಮೇಲೆ ನೇತಾಡಿಕೊಂಡು ವಿದ್ಯಾರ್ಥಿನಿಯರ ಪ್ರಯಾಣ – ಬಸ್ಸಿನ ನಿರ್ವಾಹಕರಿಗೆ ದಂಡ ವಿಧಿಸಿದ ಪೊಲೀಸರು

Spread the love

ಫುಟ್ ಬೋರ್ಡ್ ಮೇಲೆ ನೇತಾಡಿಕೊಂಡು ವಿದ್ಯಾರ್ಥಿನಿಯರ ಪ್ರಯಾಣ – ಬಸ್ಸಿನ ನಿರ್ವಾಹಕರಿಗೆ ದಂಡ ವಿಧಿಸಿದ ಪೊಲೀಸರು

ಮಂಗಳೂರು: ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯರನ್ನು ಫುಟ್‌ ಬೋರ್ಡ್‌ ನಲ್ಲಿ ನೇತಾಡಿಕೊಂಡು ಪ್ರಯಾಣಕ್ಕೆ ಅವಕಾಶ ಮಾಡಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌ ಆಗಿದ್ದು ಕೂಡಲೇ ಕಾರ್ಯಪ್ರವೃತ್ತರಾದ ನಗರ ಸಂಚಾರಿ ಪೊಲೀಸರು ಬಸ್ಸಿನ ಮೇಲೆ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.

ನಗರದ ಬೊಂದೆಲ್‌ ಕಡೆಗೆ ಸಂಚರಿಸುವ ಬಸ್ಸಿನಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಮೀರಿ ಜನರನ್ನು ತುಂಬಿಸಿದ್ದಲ್ಲದೆ, ವಿದ್ಯಾರ್ಥಿನಿಯರು ಅಪಾಯಕಾರಿಯಾಗಿ ಫುಟ್‌ ಬೋರ್ಡ್‌ ನಲ್ಲಿ ನೇತಾಡಿಕೊಂಡು ಹಲವು ಕಿಲೋಮೀಟರ್‌ ಗಳ ತನಕ ಪ್ರಯಾಣಿಸುತ್ತಿರುವ ಕುರಿತು ಸಾರ್ವಜನಿಕರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಗರ ಸಂಚಾರಿ ಪೊಲೀಸರು ಕೂಡಲೇ ಸಂಬಂಧಿತ ಬಸ್ಸನ್ನು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ.

ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.


Spread the love