Home Mangalorean News Kannada News ಫೆಡರೇಶನ್ ಕಪ್: 10 ಕಿ.ಮೀ. ಓಟದಲ್ಲಿ ಲಕ್ಷ್ಮಣನ್, ಸೊರಿಯಾಗೆ ಚಿನ್ನ

ಫೆಡರೇಶನ್ ಕಪ್: 10 ಕಿ.ಮೀ. ಓಟದಲ್ಲಿ ಲಕ್ಷ್ಮಣನ್, ಸೊರಿಯಾಗೆ ಚಿನ್ನ

Spread the love

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ದಿನದ 10ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ ಇಂಡಿಯನ್ ಆರ್ಮಿಯ ಜಿ.ಲಕ್ಷಮಣ್ ಹಾಗೂ ಮಹಿಳಾ ವಿಭಾಗದಲ್ಲಿ ತಮಿಳುನಾಡಿನ ಸೊರಿಯಾ ಚಿನ್ನ ಗೆದ್ದಿದ್ದಾರೆ.

ಪುರುಷರ 10 ಕಿ.ಮೀ ಓಟದಲ್ಲಿ ಆರ್ಮಿಯ ಗೋಪಿ ಟಿ ದ್ವಿತೀಯ ಸ್ಥಾನ ಬೆಳ್ಳಿ ಪಡೆದರೆ, ಆರ್ಮಿಯ ಕೇಥರಾಮ್ ಕಂಚು ಪಡೆದಿದ್ದಾರೆ.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಲಕ್ಷ್ಮಣ್,  ಇಂದಿನ ಫಲಿತಾಂಶದ ಬಗ್ಗೆ ಸಂತೋಷವಿದೆ. ಮುಂದೆ ಏಷ್ಯನ್ ಗೇಮ್ ನಲ್ಲೂ ಭಾಗವಹಿಸಿ ಚಿನ್ನ ಪಡೆದುಯುವುದಾಗಿ ಭರವಸೆ ವ್ಯಕ್ತಪಡಿಸಿದರು. ಜಿ.ಲಕ್ಷಮಣ್ 5000 ಮೀ. ಓಟದಲ್ಲೂ ಚಿನ್ನ ಗೆದ್ದಿದ್ದರು.

ಮಹಿಳೆಯರ ವಿಭಾಗದಲ್ಲಿ ತಮಿಳುನಾಡಿನ ಸೊರಿಯಾ ಚಿನ್ನದ ಪದಕ ಪಡೆದಿದ್ದಾರೆ. ಮಹಾರಾಷ್ಟ್ರದ ಸಂಜೀವಿನಿ ಬಾಬು ದ್ವಿತೀಯ, ಮಹಾರಾಷ್ಟ್ರದ ಸ್ವಾತಿ ಹರಿಬಾಬು ತೃತೀಯ ಸ್ಥಾನ ಪಡೆದಿದ್ದಾರೆ. ಜಿ.ಲಕ್ಷ್ಮಣ್ ಹಾಗೂ ಸೊರಿಯಾ ಅಣ್ಣ- ತಂಗಿಯಾಗಿದ್ದು ಇಬ್ಬರೂ ಕ್ರೀಡೆಯಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.


Spread the love

Exit mobile version