
ಫೆ.22 ರಿಂದ ಮಾ.5ರ ವರೆಗೆ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ
ಉಡುಪಿ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿ ಆಶ್ರಯದಲ್ಲಿ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಫೆ.22 ರಿಂದ ಮಾ.5ರ ತನಕ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ದೇಗುಲದಲ್ಲಿ ಅತಿರುದ್ರ ಮಹಾಯಾಗ ನಡೆಯಲಿದೆ ಎಂದು ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷರೂ ಆದ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.
ದೇಗುಲದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನಗಳ ಕಾಲ ನಿರಂತರವಾಗಿ ಯಾಗ ನಡೆಯಲಿದೆ. ಇದಕ್ಕಾಗಿ ವೇದಿಕೆ, ಯಾಗ ಮಂಟಪ ರಚಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷವಾದ ವೇದಿಕೆಗಳನ್ನು ರಚಿಸಲಾಗಿದೆ ಎಂದರು.
ಯಾಗಕ್ಕೆ ಆಗಮಿಸುತ್ತಿರುವ 180 ಋತ್ವಿಜರ ವಾಸ್ತವ್ಯಕ್ಕಾಗಿ ವಸತಿಗೃಹ ನಿರ್ಮಿಸಲಾಗಿದೆ. 12 ದಿನಗಳ ಕಾಲ ನಡೆಯಲಿರುವ ಯಾಗದಲ್ಲಿ ಭಾಗವಹಿಸುವ 35 ಸಾವಿರದಿಂದ 1 ಲಕ್ಷದ ವರೆಗಿನ ಭಕ್ತರಿಗೆ ಅನ್ನಸಂತರ್ಪಣೆಗೆ ಬೇಕಾಗುವ ಭೋಜನ ವ್ಯವಸ್ಥೆಗೆ ಪಾಕ ಶಾಲೆ, ಭೋಜನ ಶಾಲೆ, ಉಗ್ರಾಣ ಸಜ್ಜುಗೊಳಿಸಲಾಗಿದೆ. ಭಕ್ತರಿಗೆ ಬೇಕಾಗುವ ಮಾಹಿತಿ ಕೇಂದ್ರ, ಸ್ವಾಗತ ಕೇಂದ್ರ, ಸೇವಾ ಕೇಂದ್ರ, ಧನಸಹಾಯ ಮಾಡುವ ಭಕ್ತರಿಗೆ ಪ್ರಸಾದ ಕೌಂಟರ್ನ ವ್ಯವಸ್ಥೆಗೊಳಿಸಲಾಗಿದೆ ಎಂದವರು ತಿಳಿಸಿದರು.
ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ ಮಾತನಾಡಿ, ಯಾಗದ ಪ್ರಯುಕ್ತ ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಯಾಗಕ್ಕಾಗಿ 7 ರಿಂದ 8 ಎಕರೆ ಜಾಗವನ್ನು ಬಳಸಿಕೊಳ್ಳಲಾಗಿದೆ. ದೇಗುಲ ಮತ್ತು ಭಕ್ತರ ಸಹಕಾರದೊಂದಿಗೆ ಸುಮಾರು 4 ಕೋ.ರೂ. ವೆಚ್ಚದಲ್ಲಿ ಯಾಗ ಜರಗಲಿದೆ ಎಂದರು.
ಮಾ. 2, 3, 4ರಂದು ವಾರಣಾಸಿಯ ಗಂಗಾರತಿ ತಂಡದಿಂದ “ಶಿವಾರತಿ’ ಮಾಡಿಸಲಾಗುವುದು. ಫೆ. 22ರಿಂದ ಭಕ್ತರಿಂದ ಹೊರೆಕಾಣಿಕೆ ಸ್ವೀಕರಿಸಲಾಗುವುದು. ವಿಶೇಷ ಆಕರ್ಷಣೆಯಾಗಿ ಪುಂಗನೂರು ತಳಿಯ 5 ಹಸುಗಳನ್ನು ದೇಗುಲಕ್ಕೆ ತರಲಾಗಿದೆ. ಸುಮಾರು 2,000 ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಸಚಿವರು, ಗಣ್ಯರು ಭಾಗವಹಿಸುವರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ತಿಳಿಸಿದರು.
ಮಾ. 4ರ ಸಂಜೆ ದೇಗುಲಕ್ಕೆ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳನ್ನು ವಿಶೇಷ ಮೆರವಣಿಗೆಯಲ್ಲಿ ಕರೆ ತರಲಾಗುವುದು. ಸಂಜೆ 5.30ಕ್ಕೆ ಸ್ವಾಮೀಜಿಯವರು ಅನುಗ್ರಹ ಭಾಷಣ ಮಾಡಲಿದ್ದಾರೆ. ಅನಂತರ ಸ್ವಾಮೀಜಿಯವರಿಂದ ಶ್ರೀಚಂದ್ರಮೌಳೀಶ್ವರ ಸ್ವಾಮಿಗೆ ಪೂಜೆ ನೆರವೇರಲಿದೆ. ಮಾ. 5ರಂದು ಯಾಗ ಮಂಟಪದಲ್ಲಿ ಬೆಳಗ್ಗೆ 6.30ರಿಂದ ಏಕಾದಶಿ ಕುಂಡಗಳಲ್ಲಿ ಅತಿರುದ್ರ ಮಹಾಯಾಗ, 11.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ ಸ್ವಾಮೀಜಿಯವರಿಂದ ಕಲಶಾಭಿಷೇಕ, ಮಧ್ಯಾಹ್ನ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಲಿದೆ ಎಂದವರು ತಿಳಿಸಿದರು.
ದೇಗುಲದ ಮೊಕ್ತೇಸರ ದಿನೇಶ್ ಪ್ರಭು, ಟ್ರಸ್ಟಿ ಸಂಜಯ ಪ್ರಭು, ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಕೋಶಾಧಿಕಾರಿ ಸತೀಶ್ ಪಾಟೀಲ್, ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಎಸ್. ಮಧ್ದೋಡಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಕಾರ್ಯಾಲಯ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಗಳು
೨೨.೦೨.೨೦೨೩ ಬುಧವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ಧಾರ್ಮಿಕ ಉಪನ್ಯಾಸ : ಕು. ಅಕ್ಷಯಾ ಗೋಖಲೆ, ಉಪನ್ಯಾಸಕರು, ಕಾರ್ಕಳ
ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ ೭ರಿಂದ
‘ಯಕ್ಷ ಗಾಯನ ವೈಭವ’ – ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಬಳಗದವರಿಂದ
೨೩.೦೨.೨೦೨೩ ಗುರುವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ಉಪನ್ಯಾಸ : ಕು. ಹಾರಿಕಾ ಮಂಜುನಾಥ್, ಬಾಲ ವಾಗ್ಮಿ, ಬೆಂಗಳೂರು
ಸಾAಸ್ಕೃತಿಕ ಕಾರ್ಯಕ್ರಮ : ಸಂಜೆ ೭ರಿಂದ ೮
ಭಕ್ತಿ ಸಂಗೀತ – ವಿದುಷಿ ಉಮಾಶಂಕರಿ ಉದಯಶಂಕರ್ ಮತ್ತು ಬಳಗದವರಿಂದ
ಸರಿಗಮ ಭಾರತಿ ಸಂಗೀತ ವಿದ್ಯಾಲಯ, ಪರ್ಕಳ
ರಾತ್ರಿ ೮ರಿಂದ : ಹರಿಕಥೆ – ದಕ್ಷ ಯಜ್ಞ
ಹರಿದಾಸರು: ಶ್ರೀಮತಿ ಪ್ರತಿಮಾ ಕೋಡೂರು ಮತ್ತು ಬಳಗದವರಿಂದ
೨೪.೦೨.೨೦೨೩ ಶುಕ್ರವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ಧಾರ್ಮಿಕ ಉಪನ್ಯಾಸ : ಶ್ರೀ ಸೂರ್ಯನಾರಾಯಣ ಭಟ್, ಕಶೆಕೋಡಿ, ಸದಸ್ಯರು, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್
ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ ೭ರಿಂದ
“ಶಿವ ಗಾನಾಮೃತ” – ತುಳುನಾಡ ಗಾನ ಗಂಧರ್ವ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗ
೨೫.೦೨.೨೦೨೩ ಶನಿವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ಧಾರ್ಮಿಕ ಉಪನ್ಯಾಸ : ಶ್ರೀ ಅಜಿತ್ ಹನುಮಕ್ಕನವರ, ಸುವರ್ಣ ನ್ಯೂಸ್ ಚಾನೆಲ್‌ನ ಸುದ್ದಿ ವಿಭಾಗದ ಮುಖ್ಯಸ್ಥರು
ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ ೭ರಿಂದ
“ಭಕ್ತಿ ಗಾನ ಸಿಂಚನ” – ಉದಯೋನ್ಮುಖ ಕಲಾವಿದರಾದ ಗಗನ್ ಗಾಂವ್ಕರ್, ಅನುರಾಧ ಭಟ್, ಸುನೀತಾ ಭಟ್ ಕೂಡುವಿಕೆಯಲ್ಲಿ
೮:೩೦ ರಿಂದ : ರಾಷ್ಟçದೇವೋಭವಃ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ
“ಪುಣ್ಯ ಭೂಮಿ ಭಾರತ” (ಆದರ್ಶ್ ಗೋಖಲೆ ಅವರ ನಿರೂಪಣೆಯಲ್ಲಿ)
ನೃತ್ಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್
೨೬.೦೨.೨೦೨೩ ಆದಿತ್ಯವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ಧಾರ್ಮಿಕ ಉಪನ್ಯಾಸ : ಶ್ರೀ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಜಿಲ್ಲಾ ಸಮಿತಿ ಸದಸ್ಯರು, ಹಿಂದೂ ಜಾಗರಣ ವೇದಿಕೆ, ಉಡುಪಿ
ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ ೭ರಿಂದ
ಕಪರ್ಧಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್, ಬೆಂಗಳೂರು ಇವರಿಂದ ಭಾರತೀಯ ಶಾಸ್ತಿçÃಯ ನೃತ್ಯ
“ಮಹಾರುದ್ರ”
ರಾತ್ರಿ ೮:೩೦ ರಿಂದ : ನೃತ್ಯ ರೂಪಕ – ನಾರಸಿಂಹ (ಒಳಿತಿನ ವಿಜಯದ ಕಥನ) – ನೃತ್ಯ ನಿಕೇತನ, ಕೊಡವೂರು
ರಚನೆ : ಶ್ರೀಮತಿ ಸುಧಾ ಆಡುಕಳ
ನಿರ್ದೇಶನ : ಡಾ| ಶ್ರೀಪಾದ ಭಟ್
ನೃತ್ಯ ನಿರ್ದೇಶನ : ವಿದ್ವಾನ್ ಸುಧೀರ್ ಕೊಡವೂರು,
ವಿದುಷಿ ಮಾನಸಿ ಸುಧೀರ್, ವಿದುಷಿ ಅನಘಶ್ರೀ
೨೭.೦೨.೨೦೨೩ ಸೋಮವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ಧಾರ್ಮಿಕ ಉಪನ್ಯಾಸ : ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಅಧ್ಯಕ್ಷರು, ಅಖಿಲ ಭಾರತೀಯ ಜ್ಞಾನ ಭಾರತಿ ಪ್ರಕಾಶನ ನಿಯಮಿತ, ಮಂಗಳೂರು
ಸಾAಸ್ಕೃತಿಕ ಕಾರ್ಯಕ್ರಮ : ಸಂಜೆ ೭ರಿಂದ
ಏಕಾದಶ ವೀಣಾ ವಾದನ : ವಿದುಷಿ ಪವನಾ ಬಿ. ಆಚಾರ್ಯ ಮತ್ತು ವಿದ್ಯಾರ್ಥಿಗಳು
೮.೩೦ರಿಂದ : ಯಕ್ಷಗಾನ ಬಯಲಾಟ
‘ಭೀಷ್ಮ ವಿಜಯ’ – ಸಾಲಿಗ್ರಾಮ ಮೇಳ
೨೮.೦೨.೨೦೨೩ ಮಂಗಳವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ಪ್ರಧಾನ ಭಾಷಣಗಾರರು: ಶ್ರೀ ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ
ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ ೭ರಿಂದ
ಭರತನಾಟ್ಯ – ವಿದುಷಿ ರೂಪಾ ಕಿರಣ್, ಹಾಂಕಾAಗ್ ಇವರಿಂದ
೮ರಿಂದ : ತುಳು ಪೌರಾಣಿಕ ನಾಟಕ ‘ಬೊಳ್ಳಿ ಮಲೆತ ಶಿವ ಶಕ್ತಿಲು’
ಸಾಯಿ ಶಕ್ತಿ ಕಲಾ ತಂಡ, ಉರ್ವ ಚಿಲಿಂಬಿ, ಮಂಗಳೂರು
೦೧.೦೩.೨೦೨೩ ಬುಧವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ಧಾರ್ಮಿಕ ಉಪನ್ಯಾಸ : ಶಿವಧ್ಯಾನದಿಂದ ಧನ್ಯತೆಯ ಜೀವನ
ರಾಜಯೋಗಿನಿ ಬಿ.ಕೆ ವೀಣಾ, ಶಿರಸಿ, ಪ್ರಖ್ಯಾತ ಪ್ರೇರಣಾದಾಯಿ, ಆಧ್ಯಾತ್ಮಿಕ ಪ್ರವಚನಕಾರರು
ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ ೭ರಿಂದ
ಜಾಗೃತಿಗಾಗಿ ಜಾದೂ – ಆಧ್ಯಾತ್ಮಿಕ ಜಾದೂ ಪ್ರದರ್ಶನ
ವಿಶ್ವವಿಖ್ಯಾತ ಜಾದೂಗಾರ ಪ್ರೊ. ಶಂಕರ್ ಹಾಗೂ ಜೂ. ಶಂಕರ್ ಅವರ ಗಿಲಿಗಿಲಿ ಮ್ಯಾಜಿಕ್ ತಂಡ
ರಾತ್ರಿ ೮ರಿಂದ : ಗಾಳಿಯಲ್ಲಿ ಚಿತ್ತಾರ
ಗ್ಲೋ ಆರ್ಟ್ ಖ್ಯಾತಿಯ ಪ್ರಖ್ಯಾತ ಕಲಾವಿದ ವಿನಯ್ ಹೆಗಡೆ ಬೆಂಗಳೂರು ಇವರಿಂದ ಬ್ರಶ್ ಕ್ಯಾನ್‌ವಸ್ ಇಲ್ಲದೆ ಗಾಳಿಯಲ್ಲಿ ಬಿಡಿಸುವ ಶಿವ ಪರಮಾತ್ಮನ ವರ್ಣರಂಜಿತ ಅನಿಮೇಟ್ ಚಿತ್ತಾರ ವಿಸ್ಮಯ
೦೨.೦೩.೨೦೨೩ ಗುರುವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ಧಾರ್ಮಿಕ ಉಪನ್ಯಾಸಕರು : ಶ್ರೀ ಭೀಮೇಶ್ವರ ಜೋಶಿ, ಧರ್ಮದರ್ಶಿಗಳು, ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ
೭:೩೦ರಿಂದ : ಭಕ್ತಿಗಾಯನ
ಸಂಗೀತ ಶಾರದೆ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಇವರಿಂದ
೦೩.೦೩.೨೦೨೩ ಶುಕ್ರವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ದಿಕ್ಸೂಚಿ ಭಾಷಣ : ಸಿ.ಟಿ. ರವಿ, ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕರು, ಚಿಕ್ಕಮಗಳೂರು
೭:೩೦ರಿಂದ : ಸಂಗೀತ ಕಾರ್ಯಕ್ರಮ
ಪ್ರಸಿದ್ಧ ಶಾಸ್ತಿçÃಯ ಗಾಯಕ ಶ್ರೀ ಜಯತೀರ್ಥ ಮೇವುಂಡಿ
೦೪.೦೩.೨೦೨೩ ಶನಿವಾರ
ಧಾರ್ಮಿಕ ಸಭಾ ಕಾರ್ಯಕ್ರಮ : ಸಂಜೆ ೫ರಿಂದ
ಉದ್ಘಾಟನೆ ಮತ್ತು ಆಶೀರ್ವಚನ : ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮೀಗಳವರಿಂದ
೭ರಿಂದ : ಪ್ರಸಿದ್ಧ ಟಿವಿ ರಿಯಾಲಿಟಿ ಶೋ ‘ಜೀ ಸರಿಗಮಪ’ ಖ್ಯಾತಿಯ ಮಕ್ಕಳಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ
೦೫.೦೩.೨೦೨೩ ಆದಿತ್ಯವಾರ
ಅಪರಾಹ್ನ ೨ರಿಂದ “ಕಾಶ್ಮೀರ ವಿಜಯ” ತಾಳಮದ್ದಲೆ