
ಫೆ. 25, ರಾಜ್ಯದ ವಿವಿಧ ಗ್ರಾಪಂಗಳಿಗೆ ಉಪ ಚುನಾವಣೆ
ಬೆಂಗಳೂರು : ರಾಜ್ಯ ಚುನಾವಣಾ ಆಯೋಗವು 2023ರ ಜನವರಿ ಮಾಹೆಯಿಂದ 2023ರ ಏಪ್ರಿಲ್ ಮಾಹೆಯವರೆಗೆ ಅವಧಿ ಮುಕ್ತಾಯವಾಗುವ 08 ಗ್ರಾಮ ಪಂಚಾಯಿತಿಗಳ 127 ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ, ಖಾಲಿ ಉಳಿದಿರುವ 103 ಗ್ರಾಮ ಪಂಚಾಯಿತಿಗಳ 135 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ಚುನಾವಣಾ ಆಯೋಗವು ಅಧಿಸೂಚನೆ ಫೆ.8ರ ಬುಧವಾರ ಹೊರಬರಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ಫೆ.14 ಆಗಿದ್ದು, ಫೆ.15ರಂದು ನಾಮಪತ್ರ ಪರಿಶೀಲನೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಫೆ. 17 ಕೊನೆಯ ದಿನಾಂಕವಾಗಿದೆ. ಮತದಾನ ಅವಶ್ಯವಿದ್ದಲ್ಲಿ, ಮತದಾನವನ್ನು ಫೆ. 25ರಂದು ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಮರು ಮತದಾನ ಅವಶ್ಯವಿದ್ದಲ್ಲಿ, ಮತದಾನವನ್ನು ಫೆ. 27ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮತಗಳ ಎಣಿಕೆ ಫೆ.28 ರಂದು ಬೆಳಿಗ್ಗೆ 8 ಗಂಟೆಯಿಂದ, ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಚುನಾವಣೆ ಮುಕ್ತಾಯವಾಗುವ ಫೆ. 28 ಆಗಿದೆ
ಚುನಾವಣೆ ನೀತಿ ಸಂಹಿತೆಯು ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫೆ. 8 ರಿಂದ 28 ರವರೆಗೆ ರವರೆಗೆ ಜಾರಿಯಲ್ಲಿರುತ್ತದೆ ಎಂದು ಕರ್ನಾಟಕ, ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.