ಫೆ.3: ಸಂಶೋಧನಾ ವೇದಿಕೆ ಉದ್ಘಾಟನೆ

Spread the love

ಫೆ.3: ಸಂಶೋಧನಾ ವೇದಿಕೆ ಉದ್ಘಾಟನೆ

ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ’ಹೀಲ್ & ಕಂಫರ್ಟ್ ಎಂಬ ಧ್ಯೇಯದೊಂದಿಗೆ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದೆ. ಆಡಳಿತಾಧಿಕಾರಿ ರೆ.ಫಾ. ರೋಶನ್ ಕ್ರಾಸ್ತಾ, ಪ್ರಾಂಶುಪಾಲರು ಡಾ. ಇ.ಎಸ್.ಜೆ ಪ್ರಭುಕಿರಣ್ ಮತ್ತು ಉಪಪ್ರಾಂಶುಪಾಲರು ಡಾ ವಿಲ್ಮ ಮೀರಾ ಡಿಸೋಜ ನೇತೃತ್ವದ ಪ್ರಧಾನ ಶಿಕ್ಷಣಾ ಸಂಸ್ಥೆ ಡಾ ಕುರಿಯನ್ ಪಿ.ಜೆ. ನೇತೃತ್ವದ ಸಂಶೋಧನಾ ಮತ್ತು ಅಭಿವೃದ್ಧಿ ಸಮಿತಿಯು ಹೋಮಿಯೋಪಥಿ ಸಂಶೋಧನಾ ಕ್ಷೇತ್ರದಲ್ಲಿ ಸಕ್ರಿಯವಾಗಿದೆ.

ಭೋಧಕವರ್ಗ ಮತ್ತು ವಿದ್ಯಾರ್ಥಿಗಳಲ್ಲಿ ವಿದ್ವತ್ಪೂರ್ಣ ಅಭ್ಯಾಸ ಮತ್ತು ಸಂಶೋಧನಾ ಕೇಂದ್ರಿತ ವಾತಾವರಣವನ್ನು ಬೆಳೆಸುವ ಸಲುವಾಗಿ ಸಮಿತಿಯು ಡಾ ಅನಿತಾ ಲೋಬೊ ಮತ್ತು ಡಾ ವಿವೇಕ್ ಶಕ್ತಿಧರನ್ ಅವರ ಸಹಯೋಗದೊಂದಿಗೆ ಸಂಶೋಧನಾ ವೇದಿಕೆಯನ್ನು ರಚಿಸಿದ್ದು, ಇದನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರು ರೆ. ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಫೆಬ್ರವರಿ 03, 2021 ರಂದು ಅಪರಾಹ್ನ 2:45ಕ್ಕೆ, ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಸಂಶೋಧನಾ ಮುಖ್ಯಸ್ಥರು ಡಾ ಬಿ. ಸಂಜೀವ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭದ ನಂತರ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದ ಜೀವ ರಾಸಾಯನಿಕ ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ ಶಿವಶಂಕರ ಎ.ಆರ್. ಅವರು ’ಸಂಶೋಧನೆ – ಮುಂದಿನ ದಾರಿ’ ಎಂಬ ಶೀರ್ಷಿಕೆಯ ತರಭೇತಿ ನೀಡಲಿದ್ದಾರೆ.


Spread the love