ಫೆ. 6ರಿಂದ ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ನವೇನ ಪ್ರಾರ್ಥನೆ ಆರಂಭ

Spread the love

ಫೆ. 6ರಿಂದ ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ನವೇನ ಪ್ರಾರ್ಥನೆ ಆರಂಭ

ಮಂಗಳೂರು: ಜೆಪ್ಪು ಸಂತ ಆಂತೋನಿ ಆಶ್ರಮ ವತಿಯಿಂದ ಫೆಬ್ರವರಿ 15 ರಂದು ಮಿಲಾಗ್ರಿಸ್ ದೇವಾಲಯದ ತೆರೆದ ಮೈದಾನದಲ್ಲಿ ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬಕ್ಕೆ ತಯಾರಿಯಾಗಿ ಫೆಬ್ರವರಿ 6 ರಂದು ಸಾಯಾಂಕಾಲ 6 ಗಂಟೆಗೆ ಮಿಲಾಗ್ರಿಸ್ ದೇವಾಲದ ಧರ್ಮಗುರು ವಂದನೀಯ ಸ್ವಾಮಿ ಬೊನವೆಂಚರ್ ನಜರೇತ್ ದೇವಾಲಯದ ಮುಂದುಗಡೆ ಸಂತ ಆಂತೋನಿಯವರ ಧ್ವಜಾರೋಹಣ ಮಾಡುವ ಮೂಲಕ ನವದಿನಗಳ ನವೇನ ಪ್ರಾಥನೆಗೆ ಚಾಲನೆ ನೀಡುವರು. ತದನಂತರ [ಮೊದಲ ದಿನದ ಬಲಿಪೂಜೆ ಅರ್ಪಿಸಿ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವರು. ಈ ದಿನಗಳಲ್ಲಿ ಹಲವಾರು ಶಾಲಾ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಅವರಿಗಾಗಿ ಸಹ ಪ್ರಾರ್ಥನೆ ಸಲ್ಲಿಸಲಾಗುವುದು.]

ಒಂಬತ್ತು ದಿನಗಳ ನವೇನ ಪ್ರಾರ್ಥನೆಯಲ್ಲಿ ವಿವಿಧ ವರ್ಗಗಳ ಜನರಿಗಾಗಿ ಪ್ರಾರ್ಥನೆ ಸಲ್ಲಿಸಲಾಗುವುದು. ಹಿರಿಯ ನಾಗರಿಕರಿಗಾಗಿ, ವ್ಯಾಧಿಸ್ಥರಿಗಾಗಿ, ಕೆಟ್ಟ ಚಟಗಳಿಗೆ ಬಲಿಯಾದವರಿಗಾಗಿ, ದಂಪತಿಗಾಳಿಗಾಗಿ, ನಿರುದ್ಯೋಗಿಗಳಿಗಾಗಿ ಹೀಗೆ ನಾನಾ ತರಹದ ಕಷ್ಟ-ಸಂಕಷ್ಟಗಳಿಗೆ ಸಿಲುಕಿದವರಿಗಾಗಿ ಸಾಂತ್ವಾನ ಸಿಗಲೆಂದು ಸಂತ ಆಂತೋನಿಯವರ ವಿಶೇಷ ಕೋರಿಕೆಗಾಗಿ ಪ್ರಾರ್ಥಿಸಲಾಗುವುದು. ಒಂದೊಂದು ದಿನ ಒಂದೊಂದು ದೇವಾಲಯದ ಗಾಯನ ಪಂಗಡಗಳು ಭಕ್ತಿ-ಕಾರ್ಯಕ್ರಮದಲ್ಲಿ ನೆರವು ನೀಡಲಿದ್ದಾರೆ.

ಹಬ್ಬದ ಹಿನ್ನೆಲೆ: ಸಂತ ಆಂತೋನಿಯವರು ಹುಟ್ಟಿದ್ದು 1195 ರಲ್ಲಿ ಪೆÇೀರ್ಚುಗಲ್ನ ಲಿಸ್ಬನ್ ನಗರದಲ್ಲಿ. 1231 ರಲ್ಲಿ ತಮ್ಮ 36 ನೇ ವಯಸ್ಸಿನಲ್ಲಿ ಇಟೆಲಿಯ ಪಾದ್ವಾ ನಗರದಲ್ಲಿ ನಿಧನರಾದರು. ಅವರ ಜೀವಿತಾವಧಿ ಚಿಕ್ಕದಾಗಿದ್ದರೂ ಅವರು ನಿರಂತರವಾಗಿ ದೇವರ ವಾಕ್ಯವನ್ನು ಸಾರಿ ಯೇಸು ಸ್ವಾಮಿಯ ಹೆಸರಲ್ಲಿ ಆನೇಕ ಮಂದಿಯನ್ನು ಗುಣ ಪಡಿಸಿದ್ದರು. ತಮ್ಮ ಜೀವನದ ಕೊನೆಯ ಸಮಯವನ್ನು ಪಾದ್ವಾ ನಗರದಲ್ಲಿ ಕಳೆದುದರಿಂದ ಅವರನ್ನು ಪಾದ್ವಾ ನಗರದ ಸಂತರೆಂದೇ ಕರೆಯಲಾಗುತ್ತದೆ. ಸಂತ ಆಂತೋನಿಯವರು ನಿಧನರಾದ 32 ವರ್ಷಗಳ ನಂತರ ಅವರ ಸಮಾಧಿಯನ್ನು ತೆರೆದಾಗ ಅಲ್ಲಿ ನೆರೆದಿದ್ದವರಿಗೆ ಒಂದು ಅದ್ಬುತ ಕಾದಿತ್ತು. ನಾಲಗೆ ಮನುಷ್ಯನ ದೇಹದ ಅತೀ ಮೃಧು ಭಾಗ. ಅತೀ ಶೀಗ್ರದಲ್ಲಿ ಕೊಳೆಯ ಬೇಕಾದ ಭಾಗ. ಆದರೆ ಸಂತ ಆಂತೋನಿಯವರ ದೇಹ ಪೂರ್ಣ ಮಣ್ಣಾಗಿದ್ದರೂ ಅವರ ನಾಲಗೆ ಮತ್ತು ಸ್ವರ-ಗಂಟಲು ತಾಜಾ ಸ್ಥಿತಿಯಲ್ಲಿ ಇದ್ದುದನ್ನು ಜನರು ಕಂಡರು. ಅಲ್ಲಿ ನೆರೆದಿದ್ದ ಜನರು ಈ ಪವಾಡ ಕಂಡು ವಿಸ್ಮಯ ಪಟ್ಟರು.

ದೇವರ ವಾಕ್ಯವನ್ನು ನಿರಂತರವಾಗಿ ಸಾರಿದ ಮಹಾನ್ ಪುರುಷನಿಗೆ ದೇವರು ಕರುಣಿಸಿದ ಭಾಗ್ಯ ಎಂದು ಮನಗಂಡರು. ಅಂದಿನಿಂದ ಇಂದಿಗೆ ಎಂಟು ಶತಮಾನ ಕಳೆದರೂ ಸಂತ ಆಂತೋನಿಯವರ ನಾಲಗೆ ಮತ್ತು ಸ್ವರ-ಗಂಟಲು ಇಟೆಲಿಯ ಪಾದ್ವಾದ ಸಂತ ಆಂತೋನಿಯ ಮಹಾದೇವಾಲಯದಲ್ಲಿ ಇಡಲಾಗಿದೆ ಮತ್ತು ಅದು ಸಹಜ ಸ್ಥಿಯಲ್ಲಿ ಇರುವುದನ್ನು ಕಾಣಬಹುದು. ಯಾತ್ರಿಕರಾಗಿ ಇಟೆಲಿಗೆ ಹೋದವರು ಖಂಡಿತವಾಗಿ ಪಾದ್ವಾ ನಗರಕ್ಕೆ ತೆರಳಿ ಸಂತ ಆಂತೋನಿಯವರು ಈ ಪುಣ್ಯ ಸ್ಮರಣಿಕೆಗಳನ್ನು ನೋಡದೆ ಹಿಂತಿರುಗುವುದಿಲ್ಲ. ಈ ಪುಣ್ಯ ಸ್ಮರಣಿಕೆಗಳ ಗೌರಾವಾರ್ಥ ಸಂತ ಆಂತೋನಿಯವರ ಭಕ್ತಾಧಿಗಳು ಪ್ರತೀ ವರ್ಷ ಫೆಬ್ರವರಿ 15 ರಂದು ಈ ಹಬ್ಬವನ್ನು ಆಚರಣೆ ಮಾಡುತ್ತಾರೆ.


Spread the love