ಫೆ. 7ರಂದು ಮಂಗಳೂರು-ಮೂಡಬಿದ್ರೆ ರಾಹೆ ಚತುಷ್ಪತ ಭೂಸ್ವಾಧಿನ ಮೌಲ್ಯ ನಿರ್ಧಾರ – ಭೂ-ಮಾಲೀಕರ ಸಭೆ

Spread the love

ಫೆ. 7 ರಂದು ಮಂಗಳೂರು-ಮೂಡಬಿದ್ರೆ ರಾಹೆ ಚತುಷ್ಪತ ಭೂಸ್ವಾಧಿನ ಮೌಲ್ಯ ನಿರ್ಧಾರ – ಭೂ-ಮಾಲೀಕರ ಸಭೆ

ಮಂಗಳೂರು-ಮೂಡಬಿದ್ರೆ-ಕಾರ್ಕಳ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ 169 ಇದರ ಚತುಷ್ಪತ ಅಭಿವೃದ್ಧಿಗೆ ಭೂಸ್ವಾಧೀನಕೊಳಪಡುವ ಜಮೀನಿನ ಭೂ- ಮೌಲ್ಯ ನಿರ್ಧರಿಸುವ ಕುರಿತು ಅಂತಿಮ ಅವಾರ್ಡ್ ನ್ನು ರಚಿಸಲಾಗಿದ್ದು ಅದರಲ್ಲಿ ಹತ್ತು ಗ್ರಾಮಗಳ ಅಂತಿಮ ಅವಾರ್ಡಿನ ಬಗ್ಗೆ ಒಪ್ಪಿಗೆ ಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಿಶೇಷ ಭೂ-ಸ್ವಾಧೀನ ಅಧಿಕಾರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಈ ಅವಾರ್ಡಿಗೆ ಮೌಲ್ಯವನ್ನು ನಿಗದಿಪಡಿಸಿದ ವಿಚಾರದಲ್ಲಿ ಪ್ರಾಧಿಕಾರವು ವಿವಿಧ ರೀತಿಯ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ ಕನಿಷ್ಟ ಮೌಲ್ಯವನ್ನು ನಿರ್ಧರಿಸಿ ಪುನರ್ ಸಲ್ಲಿಸಲು ತಿಳಿಸಿದರನ್ವಯ ವಿಶೇಷ ಭೂ- ಸ್ವಾಧೀನ ಅಧಿಕಾರಿಗಳು ದ.ಕ ಜಿಲ್ಲಾಧಿಕಾರಿಗಳ ಅಭಿಪ್ರಾಯ ಕೇಳಲಾಗಿದ್ದು ಜಿಲ್ಲಾಧಿಕಾರಿಗಳು ವಿಶೇಷ ಭೂ-ಸ್ವಾಧೀನಾಧಿಕಾರಿಗಳ ಅವಾರ್ಡ್ ನ್ನು ಸಮರ್ಥಿಸಿಕೊಂಡು ಪ್ರಾದೇಶಿಕ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಯವರಿಗೆ ಪತ್ರವನ್ನು ಬರೆದಿರುತ್ತಾರೆ.ಪ್ರಾದೇಶಿಕ ಅಧಿಕಾರಿಯವರು ಇದನ್ನು ಒಪ್ಪದೆ ಭೂ ಮೌಲ್ಯವನ್ನು ರಾಷ್ಟ್ರೀಯ ಮೌಲ್ಯ ನಿರ್ಧರಣಾ ಸಮಿತಿಯ ಸೂಚನೆಯಂತೆ ಮೌಲ್ಯವನ್ನು ನಿಗದಿಪಡಿಸಲು ಲೋಕೊಪಯೋಗಿ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುತ್ತಾರೆ.

ಸರಕಾರವು ಅದನ್ನು ಮಂಜೂರು ಮಾಡಿದಲ್ಲಿ ಜಮೀನು ಕಳಕೊಳ್ಳುವ ಭೂ-ಮಾಲೀಕರಿಗೆ ನಷ್ಟ ಉಂಟು ಮಾಡುವ ಸಂಭವವಿರುವುದರಿಂದ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ಕುರಿತು ದಿನಾಂಕ 07/02/2021 ರ ಭಾನುವಾರ ಸಾಯಂ 5 ಗಂಟೆಗೆ ಸರಿಯಾಗಿ ಮಂಗಳೂರಿನ ಕುಲಶೇಖರದಲ್ಲಿರುವ ಸೇಕ್ರೆಡ್ ಹಾರ್ಟ್ ಶಾಲೆಯ ಸಭಾಂಗಣದಲ್ಲಿ ಭೂ- ಮಾಲೀಕರ ಸಭೆಯನ್ನು ಏರ್ಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ:  9448464673(ಮರಿಯಮ್ಮ ತೋಮಸ್), 9845989018(ಪ್ರಕಾಶ್ಚಂದ್ರ), 8050133999(ವಿಶ್ವಜಿತ್)


Spread the love

3 Comments

  1. It’s clearly mentioned in the report that the owners who loose their land will meet on February 7 at Sacred Heart school hall and nowhere mention about government meeting. Why don’t you join the meeting on Feb 7 to confirm. Even you can contact the person’s whose numbers mentioned in the same report instead of commenting fake news.

  2. Mangalprean. Com is not publishing fake news. We the land loosers are holding the meeting. If you are interested then you also can attend the meeting.

  3. Why Mangalorean.com publishing fake news? This is not government meeting!! No government body will call for meeting on Sunday!!

Comments are closed.