
Spread the love
ಬಂಟಕಲ್ಲು: ಬೈಕ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು
ಉಡುಪಿ: ಕಟಪಾಡಿ – ಶಿರ್ವ ಮುಖ್ಯ ರಸ್ತೆಯ ಬಂಟಕಲ್ ತಾಂತ್ರಿಕ ಕಾಲೇಜಿನ ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ ಪಟ್ಟ ಘಟನೆ ರವಿವಾರ ರಾತ್ರಿ ಸಂಭವಿಸಿದೆ.
ಮೃತ ಪಟ್ಟ ಮಹಿಳೆಯನ್ನು ಬಂಟಕಲ್ ಕಾಲೇಜು ಹಿಂಬದಿಯ ಬಾಡಿಗೆ ಮನೆ ನಿವಾಸಿ ಯಲ್ಲಮ್ಮ(55) ಎಂದು ಗುರುತಿಸಲಾಗಿದೆ.
ಅಪಘಾತ ನಡೆದ ತತ್ ಕ್ಷಣ ಗಂಭೀರ ಗಾಯಗೊಂಡ ಗಾಯಾಳುವನ್ನು ಬಂಟಕಲ್ ನಾಗರಿಕ ಸಮಿತಿಯ ಸದಸ್ಯರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಮಹಿಳೆ ಮೃತ ಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಬಂಟಕಲ್ ಕಡೆಯಿಂದ ಕಟಪಾಡಿ ಕಡೆ ಹೋಗುತ್ತಿದ್ದ ಬೈಕ್ ಸವಾರನೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿರ್ವ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.
Spread the love