ಬಂಟ್ವಾಳ: ಅಕ್ರಮ ಗಾಂಜಾ ಸಂಗ್ರಹ – ಓರ್ವನ ಬಂಧನ

Spread the love

ಬಂಟ್ವಾಳ: ಅಕ್ರಮ ಗಾಂಜಾ ಸಂಗ್ರಹ – ಓರ್ವನ ಬಂಧನ

ಮಂಗಳೂರು: ಅಕ್ರಮವಾಗಿ ಸಂಗ್ರಹಿಸಿಟ್ಟ ಸುಮಾರು 30,000/- ಮೌಲ್ಯದ 1 ಕೆ.ಜಿ 150 ಗ್ರಾಂ ಗಾಂಜಾವನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ವಶಪಡಿಸಿಕೊಂಡು ಒರ್ವನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಇಕ್ಬಾಲ್ @ ಕಡ್ಲೆ ಇಕ್ಬಾಲ್ ಎಂದು ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ತಾಲೂಕಿನಾದ್ಯಂತ ಅಕ್ರಮವಾಗಿ ಗಾಂಜಾ ಶೇಖರಿಸಿ ವಿತರಣೆ ಮಾಡುತ್ತಿದ್ದ ಮತ್ತು ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ನಿಗಾ ಇಡಲು ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ ರವರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ, ಪೊಲೀಸ್‌ ಉಪಾಧೀಕ್ಷಕರು, ಬಂಟ್ವಾಳ ಉಪವಿಭಾಗ ರವರ ನಿರ್ದೇಶನದಂತೆ ಬಂಟ್ವಾಳ ತಾಲೂಕಿನಲ್ಲಿ ಅಕ್ರಮ ಗಾಂಜಾ ಪತ್ತೆ ಹಚ್ಚಲು ತಂಡವನ್ನು ರಚಿಸಿದ್ದು ಅದರಂತೆ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ನೇತೃತ್ವದ ತಂಡ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಅಕ್ರಮವಾಗಿ ಸುಮಾರು 30,000/- ಮೌಲ್ಯದ 1 ಕೆ.ಜಿ 150 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಕ್ಬಾಲ್ @ ಕಡ್ಲೆ ಇಕ್ಬಾಲ್ ನನ್ನು ದಸ್ತಗಿರಿ ಮಾಡಿದ್ದಾರೆ. ಪ್ರಕರಣದ ಸಹ ಆರೋಪಿಗಳಾದ ಸಜೀಪನಡುವಿನ ಎಸ್.ಕೆ ರಫೀಕ್ ಮತ್ತು ಕಂಚಿನಡ್ಕ ಪದವಿನ ಮೋನು @ ಪಿಲಿ ಮೋನು ತಲೆಮರೆಸಿಕೊಂಡಿರುತ್ತಾರೆ. ಸದ್ರಿ ಪ್ರಕರಣವು ಮೇಲಿನ ಅ.ಕ್ರದಂತೆ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿರುತ್ತದೆ.

ಪ್ರಕರಣದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ. ಎಂ.ಎಸ್, ವಿಶೇಷ ತಂಡದ ಸದಸ್ಯರಾದ ಉದಯ ರವಿ, ಜನಾರ್ಧನ, ಸುರೇಶ್, ಪ್ರವೀಣ್, ಗೋಣಿಬಸಪ್ಪ, ಇರ್ಷಾದ್, ವಿವೇಕ್, ಕುಮಾರ್ ರವರ ತಂಡ ಪಾಲ್ಗೊಂಡಿರುತ್ತಾರೆ.


Spread the love