ಬಂಟ್ವಾಳ : ಡಿಶ್ ರಿಪೇರಿ ಮಾಡುತ್ತಿದ್ದ ವೇಳೆ ಟೆಕ್ನಿಷಿಯನ್ ಕಟ್ಟಡದಿಂದ ಆಯತಪ್ಪಿ ಬಿದ್ದು ಮೃತ್ಯು

Spread the love

ಬಂಟ್ವಾಳ : ಡಿಶ್ ರಿಪೇರಿ ಮಾಡುತ್ತಿದ್ದ ವೇಳೆ ಟೆಕ್ನಿಷಿಯನ್ ಕಟ್ಟಡದಿಂದ ಆಯತಪ್ಪಿ ಬಿದ್ದು ಮೃತ್ಯು

ಬಂಟ್ವಾಳ : ಬಿ.ಸಿ.ರೋಡ್ – ಕೈಕಂಬದ ವಸತಿ ನಿಲಯದ ಮೂರು ಮಹಡಿ ಕಟ್ಟಡದಲ್ಲಿ ದೂರದರ್ಶದ ಡಿಶ್ ರಿಪೇರಿ ಮಾಡುತ್ತಿದ್ದ ವೇಳೆ ಟೆಕ್ನಿಷಿಯನ್ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಮೃತರನ್ನು ಕೊಯಿಲ ಗ್ರಾಮದ ಗೋವಿಂದಬೆಟ್ಟು ನಿವಾಸಿ ಯತೀಶ್ ಗಾಣಿಗ (30) ಎಂದು ಗುರುತಿಸಲಾಗಿದೆ.

ಡಿಶ್ ರಿಪೇರಿ ಮಾಡುವ ವೇಳೆ ಆಯತಪ್ಪಿ ಮೂರನೇ ಮಹಡಿಯಿಂದ ಬಿದ್ದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಮಿಲಾದುನ್ನಬಿ ಸಂಘದ ನುಸ್ರತ್ ಅವರು ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಯತೀಶ್ ಸಾವನ್ನಪ್ಪಿದ ಬಗ್ಗೆ ವೈದ್ಯರು ದೃಢಪಡಿಸಿದ್ದರು.

ಕಳೆದ 10 ವರ್ಷಗಳಿಂದ ಟಿ.ವಿ ರಿಪೇರಿ, ಡಿಶ್ ಅಳವಡಿಕೆ, ಎಸಿ ಮೆಕ್ಯಾನಿಕ್ ಆಗಿ ವೃತ್ತಿ ಮಾಡುತ್ತಿದ್ದ ಯತೀಶ್ ತಂದೆ ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.


Spread the love