ಬಂಟ್ವಾಳ ಮಹಿಳೆಯ ಕೊಲೆ ಪ್ರಕರಣ-ಮೂವರ ಬಂಧನ

Spread the love

ಬಂಟ್ವಾಳ ಮಹಿಳೆಯ ಕೊಲೆ ಪ್ರಕರಣ-ಮೂವರ ಬಂಧನ

ಮಂಗಳೂರು: ಬಂಟ್ವಾಳ ಮಹಿಳೆಯ ಕೊಲೆ ಪ್ರಕರಣದಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಹಿಳೆಯನ್ನು ನೋಡಿಕೊಳ್ಳುತ್ತಿದ್ದ ಕೆಲಸದಾಕೆ ಪ್ರಶ್ಚಿತ ಬರೆಟ್ಟೋ (25) ಮತ್ತು ಮಹಿಳೆಯ ಬಳಿ ಇದ್ದ ಬಂಗಾರವನ್ನು ದೋಚಲು ನರಿಕೊಂಬು ನಿವಾಸಿಯಾದ ಸತೀಶ ಮತ್ತು ಚರಣ್ ಎಂದು ಗುರುತಿಸಲಾಗಿದೆ.

ಜನವರಿ 26ರಂದು ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದಲ್ಲಿ ಬೆನೆಡಿಕ್ಟ್ ಕಾರ್ಲೋ [72] ಎಂಬ ಮಹಿಳೆಯ ಅಸಹಜ ಸಾವಿನ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾಯಲ್ಲಿ ಮೃತ ಮಹಿಳೆಯ ಪುತ್ರ ತನ್ನ ತಾಯಿಯ ಸಾವಿನ ಬಗ್ಗೆ ಸಂಶಯವಿರುವುದಾಗಿ ದೂರು ನೀಡಿದ್ದರು

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮೃತ ಮಹಿಳೆಯನ್ನು ನೋಡಿಕೊಳ್ಳಲು ನೇಮಿಸಿದ್ದ ಎಲ್ಮಾ ಪ್ರಶ್ಚಿತ ಬರೆಟ್ಟೋ(25)ಅಮ್ಡಾಡಿ ಗ್ರಾಮ, ಬಂಟ್ವಾಳ ರವರು ಮೃತ ಮಹಿಳೆಯ ಬಳಿ ಇದ್ದ ಬಂಗಾರವನ್ನು ದೋಚಲು ನರಿಕೊಂಬು ನಿವಾಸಿಯಾದ ಸತೀಶ ಮತ್ತು ಚರಣ್ ರವರೊಂದಿಗೆ ಸೇರಿಕೊಂಡು ಮೃತ ಮಹಿಳೆ ಬೆನೆಡಿಕ್ಟ್ ಕಾರ್ಲೋ ರವರನ್ನು ಮನೆಯಲ್ಲಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಡಪಟ್ಟಿದ್ದು, ಮೂವರನ್ನು ದಸ್ತಗಿರಿ ಮಾಡಿದ್ದಾರೆ

ಬಂಧಿತರಿಂದ 98 ಗ್ರಾಂ ಬಂಗಾರವನ್ನು ವಶಕ್ಕೆ ಪಡೆಯಲಾಗಿರುತ್ತದೆ


Spread the love