ಬಂಟ್ವಾಳ: ಯುವಕನನ್ನು ಕೊಲೆಗೈದು ಪಾತಾಳಕ್ಕೆ ಎಸೆದ ಆರೋಪಿ; ಮೃತದೇಹಕ್ಕಾಗಿ ಕಾರ್ಯಾಚರಣೆ

Spread the love

ಬಂಟ್ವಾಳ: ಯುವಕನನ್ನು ಕೊಲೆಗೈದು ಪಾತಾಳಕ್ಕೆ ಎಸೆದ ಆರೋಪಿ; ಮೃತದೇಹಕ್ಕಾಗಿ ಕಾರ್ಯಾಚರಣೆ
 
ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಯುವಕನೋರ್ವನನ್ನು ಅದೇ ಗ್ರಾಮದ ನಿವಾಸಿ ಅನೈತಿಕ ಚಟುವಟಿಕೆಗಾಗಿ ಮುಳೂರುಪದವು ಗುಡ್ಡಕ್ಕೆ ಕರೆದುಕೊಂಡು ಬಂದು ಸುಟ್ಟು ಹಾಕಿ ಹೊಂಡಕ್ಕೆ ಎಸೆದ ಘಟನೆ  ಬೆಳಕಿಗೆ ಬಂದಿದೆ.

ಪೊಲೀಸರು ಯುವಕನ ಮೃತದೇಹವನ್ನು ಹೊರ ತೆಗೆಯಲು ಮಂಗಳವಾರ ಕಾರ್ಯಾಚರಣೆ ನಡೆಸಿದ್ದು, ಆದರೆ ಕತ್ತಲಾದ ಕಾರಣ ಕಾರ್ಯಾಚರಣೆ ನಾಳೆಗೆ ಮುಂದೂಡಿದ್ದಾರೆ.

ಬೋಳಂತೂರು ಗ್ರಾಮ ನಿವಾಸಿ ಅಬ್ದುಲ್ ಸಮದ್ ಕೊಲೆಯಾದ ಯುವಕ. ಆತನನ್ನು ಅದೇ ಗ್ರಾಮದ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತ ಕೊಲೆ ಮಾಡಿ ಗುಡ್ಡದಲ್ಲಿರುವ ಪಾತಾಳಕ್ಕೆ ಎಸೆದಿದ್ದಾನೆ.

ಸಮದ್ ಕಾಣೆಯಾಗಿರುವ ಕುರಿತು ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ತನಿಖೆ ನಡೆಸಿದಾಗ ಆತನಿಗೆ ಆರೋಪಿ ರಹಿಮಾನ್ ಜತೆ ಸಂಪರ್ಕ ಇರುವ ಸುಳಿವು ಪತ್ತೆಯಾದಾಗ ಪ್ರಕರಣ ಇಡೀ ಚಿತ್ರಣ ಹೊರ ಬೀಳುತ್ತದೆ.

ಬಂಟ್ವಾಳ ಗ್ರಾಮಾಂತರ ಹಾಗೂ ವಿಟ್ಲ ಪೊಲೀಸರು ಪ್ರಕರಣ ತನಿಖೆ ಹಾಗೂ ಕಾರ್ಯಾಚರಣೆ ನಡೆಸುತ್ತಿದ್ದಾರೆ.


Spread the love

Leave a Reply

Please enter your comment!
Please enter your name here