ಬಂಡೀಪುರದಲ್ಲಿ ಆನೆದಂತ ಮಾರಾಟಕ್ಕೆ ಯತ್ನಿಸಿದವರ ಬಂಧನ

Spread the love

ಬಂಡೀಪುರದಲ್ಲಿ ಆನೆದಂತ ಮಾರಾಟಕ್ಕೆ ಯತ್ನಿಸಿದವರ ಬಂಧನ

ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಎರಡು ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ.

ತಮಿಳುನಾಡಿನ ಆನೆ ಗಟ್ಟಿ  ಗ್ರಾಮದ ರಂಗಸ್ವಾಮಿ, ಊಟಿಯ ಸೊಕ್ಕನಹಳ್ಳಿಯ ಸಂಜೀವಕುಮಾರ್, ಮೈನಲೈ ವಿನೂತ್, ವಿನಾಯಗಪುರಂ ಕತಿರೆಸೇನ್, ಪೂಲವಾಡಿಪ್ರೀವು ಸೆಲ್ವನಾಯಗಂ ಬಂಧಿತ ಆರೋಪಿಗಳು.

ಬಂಡೀಪುರ ಅಭಯಾರಣ್ಯ ವ್ಯಾಪೀಯ ಗುಂಡ್ಲುಪೇಟೆ ಬಫರ್ ಜೋನ್ ವ್ಯಾಪ್ತಿಯ ಬಸವಪುರ ಸಮೀಪದ  ಫಾರ್ಮ್ ಹತ್ತಿರ ಮೂವರು ಆರೋಪಿಗಳನ್ನು ಆನೆ ದಂತವನ್ನು ಬಚ್ಚಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಬಂಡೀಪುರ ಸಿಎಫ್. ಡಾ.ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಬಫರ್ ಜೋನ್ ಆರ್.ಎಫ್.ಓ.ನವೀನ್ ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದೆ. ಈ ವೇಳೆ ವಿಚಾರಣೆ ನಡೆಸಿದಾಗ   ಇನ್ನು ಇಬ್ಬರು ಆರೋಪಿಗಳು ಇದರಲ್ಲಿ ಪಾಲ್ಗೊಂಡಿರುವುದು ಪತ್ತೆಯಾಗಿದ್ದು ಈ ಪೈಕಿ  ಒಬ್ಬನನ್ನು ತಮಿಳುನಾಡಿನ ಮಸಣಿಗುಡಿ ಬಸ್ ನಿಲ್ದಾಣದಲ್ಲಿಯೂ ಮತ್ತೊಬ್ಬ ಆರೋಪಿಯನ್ನು ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಬಂಧನ ಮಾಡಲಾಗಿದೆ.ಕೃತ್ಯಕ್ಕೆ ಬಳಸಿದ್ದ ಐ20 ಹುಂಡೈ (ಟಿಎನ್.43ಕೆ.9367  )ಕಾರನ್ನುವಶಕ್ಕೆ ಪಡೆದು ಆರೋಪಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

ಕಾರ್ಯಾಚರಣೆಯಲ್ಲಿ ಗುಂಡ್ಲುಪೇಟೆ ಎಸಿಎಫ್ ರವೀಂದ್ರ,  ಆರ್.ಎಫ್.ಓ.ನವೀನ್ ಕುಮಾರ್, ಡಿ.ಆರ್.ಎಫ್.ಓ  ಗಳಾದ ಮುದ್ದರಾಜ್ ಭರತ್, ರಮೇಶ್, ಕಿರಣಕುಮಾರ, ಶಿವಕುಮಾರ್, ಪ್ರವೀಣ್, ಸಿದ್ದು ಮೊದಲಾದವರು ಭಾಗವಹಿಸಿದ್ದರು.


Spread the love