ಬಂಡೀಪುರದಲ್ಲಿ ವಯಸ್ಸಾದ ಹೆಣ್ಣಾನೆ ಸಾವು

Spread the love

ಬಂಡೀಪುರದಲ್ಲಿ ವಯಸ್ಸಾದ ಹೆಣ್ಣಾನೆ ಸಾವು

ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಚಿರಕನಹಳ್ಳಿ ಗ್ರಾಮದ ಚಿಕ್ಕ ತೋಟದಕಟ್ಟೆಯ ಶನೀಶ್ವರ ತೋಪಿನ ಬಳಿ ಹೆಣ್ಣಾನೆಯೊಂದು ಮೃತಪಟ್ಟಿದೆ.

ಆನೆಗೆ 62ರಿಂದ 65 ವರ್ಷ ವಯಸ್ಸಾಗಿದೆ ಎಂದು ಅಂದಾಜಿಸಲಾಗಿದ್ದು, ವಯೋ ಸಹಜ ಕಾರಣದಿಂದ ಕೊನೆಯುಸಿರೆಳೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆನೆಯು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಿಂದ ಗುರುವಾರ (ಜೂನ್‌ 15) ರಾತ್ರಿ ಬಂಡೀಪುರದ ಕುಂದುಕೆರೆ ವ್ಯಾಪ್ತಿಯ ಕಡಬೂರು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ತಿರುಗಾಡುತ್ತಿತ್ತು. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆಯಿಂದಲೇ ಆನೆಯನ್ನು ಕಾಡಿಗೆ ಅಟ್ಟಿಸಲು ಪ್ರಯತ್ನ ಪಟ್ಟರು. ಆದರೆ, ಅದು ಹೋಗದೆ ಪೋತರಾಜು ಎಂಬುವವರಿಗೆ ಸೇರಿದ ಬೀಳು ಜಮೀನಿನಲ್ಲಿ ಬೀಡು ಬಿಟ್ಟಿತ್ತು. ಈ ನಡುವೆ ರಾತ್ರಿ ನಡೆಸಿದ ಕಾರ್ಯಾಚರಣೆಯೂ ವಿಫಲವಾಗಿತ್ತು.

ಶನಿವಾರ ಮಧ್ಯಾಹ್ನ ಆನೆ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ಅಂಗಾಂಗಳ ಮಾದರಿಯನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ನ೦ತರ ಪ್ರಕರಣದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಗುಂಡ್ಲು ಪೇಟೆ ಉಪ ವಿಭಾಗದ ಎಸಿಎಫ್‌ ಜಿ.ರವೀಂದ್ರ, ಕುಂದುಕೆರೆ ಆರ್‌ಎಫ್‌ಒ ಡಿ ಶ್ರೀನಿವಾಸ, ಇಲಾಖೆಯ ಪಶು ವೈದ್ಯ ಡಾ.ಮಿರ್ಜಾ ವಾಸೀಂ, ಎನ್‌ಜಿಒ ಪ್ರತಿನಿಧಿ ರಘುರಾಂ ಇತರರು ಇದ್ದರು.


Spread the love