
ಬಂಡೀಪುರ ಕೆರೆಯಲ್ಲಿ ಹುಲಿಯ ಕಳೇಬರ ಪತ್ತೆ
ಗುಂಡ್ಲುಪೇಟೆ: ಕೆರೆಯ ನೀರಿನಲ್ಲಿ ತೇಲುವ ಸ್ಥಿತಿಯಲ್ಲಿ ಹುಲಿಯ ಕಳೇಬರ ಪತ್ತೆಯಾದ ಘಟನೆ ಬಂಡೀಪುರ ಹುಲಿಯೋಜನೆಯ ಗುಂಡ್ಲು ಪೇಟೆ ಉಪ ವಿಭಾಗದ ಕುಂದಕೆರೆ ವಲಯ ವ್ಯಾಪ್ತಿಯ ಕೆಬ್ಬೇಪುರ ಗ್ರಾಮದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ನಡೆದಿದೆ.
ಹುಲಿಯು ಎರಡು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಸಂಶಯ ವ್ಯಕ್ತಪಡಿಸಲಾಗಿದೆ. ಹುಲಿಯ ಸಾವು ಸಹಜವೇ ಅಥವಾ ಆಕಸ್ಮಿಕವೇ ಒಟ್ಟಾರೆ ಹುಲಿ ಹೇಗೆ ಸಾವನ್ನಪ್ಪಿರಬಹುದು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಇಲಾಖಾ ಪಶು ವೈದ್ಯಾಧಿಕಾರಿಗಳು ಹುಲಿ ಸಾವಾಗಿಡಾಗಿರುವ ಸ್ಥಳಕ್ಕೆ ಆಗಮಿಸಿದ್ದು, ಹುಲಿಯ ಮೃತ ದೇಹವನ್ನು ಕೆರೆಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯ ನಂತರ ಹುಲಿಯ ಸಾವಿಗೆ ಕಾರಣವೇನೆಂಬುದು ಗೊತ್ತಾಗಬೇಕಿದೆ. ಬಂಡೀಪುರ ಹುಲಿಯೋಜನೆಯ ಕ್ಷೇತ್ರ ನಿರ್ದೇಶಕರು ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ ರಮೇಶ್‌ಕುಮಾರ್ ಅವರ ನಿರ್ದೇಶನದಂತೆ ಗುಂಡ್ಲುಪೇಟೆ ಉಪ ವಿಭಾಗ ಸಹಾಯಕ ಅರಣ್ಯ ಸ೦ರಕ್ಷಣಧಿಕಾರಿ ಜೆ.ರವೀಂದ್ರ ಮತ್ತು ಕುಂದುಕರೆ ವಲಯದ ವಲಯ ಡಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಹುಲಿ ಸಾವಿನ ಬಗ್ಗೆ ತನಿಖಾ ಕಾರ್ಯ ನಡೆಯಲಿದೆ