ಬಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತಪಟ್ಟ ಅಪರಿಚಿತ ಗಂಡಸಿನ ಮಾಹಿತಿ ಇದ್ದರೆ ನೀಡಲು ಪೊಲೀಸರ ಕೋರಿಕೆ

Spread the love

ಬಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತಪಟ್ಟ ಅಪರಿಚಿತ ಗಂಡಸಿನ ಮಾಹಿತಿ ಇದ್ದರೆ ನೀಡಲು ಪೊಲೀಸರ ಕೋರಿಕೆ

ಮಂಗಳೂರು: ಬಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತಪಟ್ಟ ಅಪರಿಚಿತ ಗಂಡಸಿನ ಮಾಹಿತಿ ಇದ್ದರೆ ನೀಡಲು ಪೊಲೀಸರು ಕೋರಿದ್ದಾರೆ

ಫೆ 21 ರಂದು ಅಂಗಡಿಗೆ ಬಂದು ಅಂಗಡಿಯಲ್ಲಿದ್ದ ಹೂವಿನ ಕಸವನ್ನು ಕ್ಲೀನ್ ಮಾಡಿ ಅಲ್ಲೇ ಪಕ್ಕದಲ್ಲಿದ್ದ ಸುಲಭ ಶೌಚಾಲಯದ ಎದುರುಗಡೆಯ ಕಸದ ರಾಸಿಗೆ ಹಾಕುವ ವೇಳೆ ಅಲ್ಲಿ ಸುಮಾರು 40-45 ವರ್ಷ ವಯಸ್ಸಿನ ಗಂಡಸು ಬಿದ್ದಿದ್ದು ಕಂಡುಬಂದಿದ್ದು ಅಕ್ಕಪಕ್ಕದವರನ್ನು ಕರೆದು ಪರಿಶೀಲಿಸಿದಾಗ ಆತನ ಮುಖದ ಭಾಗದಲ್ಲಿ ರಕ್ತ ಬಂದಿದ್ದು ಈತ ಸುಲಭ ಶೌಚಾಲಯದ ಎದುರುಗಡೆ ರಾತ್ರಿ ಬಿದ್ದು ಗಾಯಗೊಂಡಿರುವುದಾಗಿ ಅಂದಾಜಿಲಾಗಿದೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಕೂಡಲೇ ಚಿಕಿತ್ಸೆ ಬಗ್ಗೆ ಮಂಗಳೂರು ಜಿಲ್ಲಾ ವೆನ್ಲಾಖ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದು ಅಪರಿಚಿತ ಗಂಡಸು ಮೃಟಪಟ್ಟುರುವುದಾಗಿ ವೈದ್ಯರು ತಿಳಿಸಿದ್ದಾರೆ.

ಫೆ 20 ರಂದು ಅಪರಿಚಿತ ಗಂಡ ನಿನ್ನೆ ದಿನ ದಿನಾct 20-02-2023 ರಂದು ರಾತ್ರಿ: 7-30 ಗಂಟೆಯ ನಂತರ ಪಿರ್ಯಾದಿದಾರರು ಅಂಗಡಿಯನ್ನು ಮುಚ್ಚಿ ಹೋದು ಈ ದಿನ ದಿನಾಂಕ 21-02-2023 ರಂದು ಬೆಳಿಗ್ಗೆ 06-00 ಗಂಟೆ ಸುಮಾರಿಗೆ ಅಂಗಡಿಯ ಬಳಿ ಬಂದು ನೋಡಿದ್ದು ಮೃತನು ಬಿದ್ದು ಮುಖದ ಭಾಗ, ಗಾಯಗೊಂಡು ಮೃತಪಟ್ಟಿರಬಹುದಾಗಿದೆ.

ಅಪರಿಚಿತ ಗಂಡಸು ಸುಮಾರು 40 ರಿಂದ 45 ವರ್ಷ ಪ್ರಾಯ, ಎತ್ತರ 5.8, ಧೃಢಕಾಯ ಶರೀರ, ಎಡೆ, ಕಪ್ಪು ಮೈಬಣ್ಣ, ಮುಖದಲ್ಲಿ, ಕುರುಚಲು ದಮ್ಮ ಗಡ್ಡ, ಮೀಸೆ ಹಾಗೂ ಕಪ್ಪು ತಲೆಕೂದಲು ಇರುತ್ತದೆ, ನಸು ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್ ಕಂದು ಬಣದ ಒಳ ಚಡ್ಡಿ, ಬಿಳಿ ಬಣ್ಣದ ಸ್ವಾಂಡೋ ಬನಿಯನ್ ಧರಿಸಿರುತ್ತಾರೆ.

ಅಪರಿಚಿತ ಮೃತ ಗಂಡಸಿನ ಭಾವಚಿತ್ರ

ಈ ಮೇಲಿನ ಚಹರೆಯುಳ್ಳ ಮೃತ ವ್ಯಕ್ತಿಯ ವಾರೀಸುದಾರರು ಇದ್ದಲ್ಲಿ, ಈ ಕೆಳಗಿನ ಅಧಿಕಾರಿಯವರಿಗೆ ಮುಖತಃ ಅಥವಾ ದೂರವಾಣಿ ಮೂಲಕ ಸಂಪರ್ಕಿಸಲು ಕೋರಲಾಗಿದೆ,

ಪೊಲೀಸ್ ನಿರೀಕ್ಷಕರು, ಮಂಗಳೂರು ಉತ್ತರ ಪೊಲೀಸ್ ಠಾಣೆ 0824-2220516, ಮೊಬೈಲ್ ನಂಬ್ರ: 9480805338 ಪೊಲೀಸ್ ಉಪ ನಿರೀಕ್ಷಕರು (ಕಾಶಿಸು-1), ಮಂಗಳೂರು ಉತ್ತರ ಪೊಲೀಸ್ ಠಾಣೆ 0824-2220516, ಮೊಬೈಲ್ ನಂ 9480805345 ಪೊಲೀಸ್ ಉಪ ನಿರೀಕ್ಷಕರು (ಕ್ರೈಂ), ಮಂಗಳೂರು ಉತ್ತರ ಪೊಲೀಸ್ ಠಾಣೆ 0824-2220516, ಮೊಬೈಲ್ ನಂಬ್ರ 9480802338


Spread the love