
ಬಂಧಿತ ಎನ್ ಎಸ್ ಯು ಐ ಮುಖಂಡರನ್ನು ಬಿಡುಗಡೆಗೊಳಿಸುವಂತೆ ವಿದ್ಯಾರ್ಥಿಗಳಿಂದ ಮನವಿ
ಕುಂದಾಪುರ (Mangalorean News Desk): ವಿದ್ಯಾರ್ಥಿ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೋರಿ ಎನ್ ಎಸ್ ಯು ಐ ಬೈಂದೂರು ತಾಲೂಕು ಘಟಕದ ವತಿಯಿಂದ ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜೂನ 1 ರಂದು ಶಿಕ್ಷಣ ಸಚಿವ ಬಿಸಿ. ನಾಗೇಶ್ ಅವರ ತಿಪಟೂರಿನ ನಿವಾಸದ ಮುಂದೆ ಎನ್.ಎಸ್.ಯು ಐ ಮುಖಂಡರು ಹಾಗೂ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದು, ಅವರನ್ನು ರಾಜ್ಯ ಸರ್ಕಾರ ಮನೆಗೆ ಬೆಂಕಿ ಇಡಲು ಬಂದಿದ್ದಾರೆ ಎಂಬ ನೆಪವೊಡ್ಡಿ ಬಂಧಿಸಿದ್ದಾರೆ, ಸುಮಾರು 15 ಜನರನ್ನು ಬಂಧಿಸಿ ಈಗಾಗಲೇ 2 ದಿನಗಳು ಕಳೆದಿದೆ. ಆದರಲ್ಲಿ ಪ್ರಮುಖರಾದ ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಸೇರಿದಂತೆ 22 ಜನ ಕಾರ್ಯಕರ್ತರನ್ನು ಬಂಧಿಸಿ ತುಮಕೂರಿನ ಕಾರಾಗೃಹದಲ್ಲಿ ಇಟ್ಟಿರುವುದು ಖಂಡನೀಯ.
ಈ ಸರ್ಕಾರ ವಿದ್ಯಾರ್ಥಿಗಳ ನೋವು, ತೊಂದರೆಗಳಲ್ಲಿ ಸದಾ ಮುಂದೆ ನಿಲ್ಲುವ ಎನ್ ಎಸ್ ಯು ಐ ಸಂಘಟನೆಯನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾದ ಸರ್ಕಾರದ ಮುಂದೆ ಪ್ರಶ್ನೆ ಮಾಡುವ ಹಕ್ಕನ್ನು ಸಹಿತ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಸರ್ಕಾರ ನಮ್ಮ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವನ್ನು ನೋಡುತ್ತಾ ಬಳಿಸಕೊಳ್ಳಲು ನಾವು ಸಿದ್ಧರಿಲ್ಲ, ಕೇಸರೀಕರಣವು ನಮ್ಮ ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಣದ ಮೇಲೆ ಪರಿಣಾಮ ಬೀರಲು ನಾವು ಬಿಡುವುದಿಲ್ಲ, ಪ್ರತಿಭಟನಾಕಾರರನ್ನು ಬಂಧಿಸಬಹುದು ಆದರೆ ನಿಲ್ಲಿಸಲು ಸಾದ್ಯವಿಲ್ಲ. ಆದ್ದರಿಂದ ತಾವುಗಳು ನಮ್ಮ ಬೇಡಿಕೆಯನ್ನು ಸರ್ಕಾರದ ಮಟ್ಟಿಗೆ ತಲುಪಿಸಿ, ಬಂಧಿತ ಎನ್ ಎಸ್ ಯು ಐ ಎಲ್ಲಾ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.