ಬಜಪೆ ಗೋಶಾಲೆ ದ್ವಂಸದ ಬಗ್ಗೆ ಶಾಸಕ ಸುನೀಲ್ ಮೌನಕ್ಕೆ ಕಾರಣವೇನು? – ಕೃಷ್ಣ ಶೆಟ್ಟಿ ಬಜಗೋಳಿ

Spread the love

ಬಜಪೆ ಗೋಶಾಲೆ ದ್ವಂಸದ ಬಗ್ಗೆ ಶಾಸಕ ಸುನೀಲ್ ಮೌನಕ್ಕೆ ಕಾರಣವೇನು? – ಕೃಷ್ಣ ಶೆಟ್ಟಿ ಬಜಗೋಳಿ

ಕಾರ್ಕಳ: ಪ್ರಚಂಚದ ಯಾವ ಭಾಗದಲ್ಲಿ ಏನೇ ಸಣ್ಣಪುಟ್ಟ ಘಟನೆಗಳು ನಡೆದರೂ ತಕ್ಷಣ ಅವಕ್ಕೆ ಮಾದ್ಯಮದ ಮೂಲಕ ಪ್ರತಿಕ್ರಿಯೆ ನೀಡುವ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು ಬಜಪೆ ಗೋಶಾಲೆ ದ್ವಂಸದ ಬಗ್ಗೆ ಒಂದೇ ಒಂದು ಮಾದ್ಯಮ ಹೇಳಿಕೆ ಕೊಡದೇ ಇರುವುದು ಪರಮಾಶ್ಚರ್ಯ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಹಿಂದುತ್ವ, ಗೋಮಾತೆ ಎನ್ನುತ್ತಾ ರಾಜಕೀಯ ನೆಲೆಕಂಡುಕೊಂಡು ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಅವರು ಕಪಿಲ ಗೋಶಾಲೆಯ ದ್ವಂಸದ ಬಗ್ಗೆ ಮಾತನಾಡದೇ ಇರುವುದು, ಗೋಶಾಲೆ ದ್ವಂಸದ ಬಗ್ಗೆ ಮಾನ್ಯ ಶಾಸಕರ ಮೌನವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.

ಹಿಂದುತ್ವ, ಗೋಮಾತೆಯ ವಿಚಾರ ಬಂದಾಗ ಮಾದ್ಯಮಗಳಲ್ಲಿ ಸಿಡಿದೇಳುವ ಸುನೀಲ್ ಕುಮಾರ್ ಅವರು ಬಜಪೆ ಕಪಿಲ ಗೋಶಾಲೆಯ ದ್ವಂಸಕ್ಕೆ ಮಾತನಾಡದೇ ಮೌನವಹಿಸಿರುವುದು, ಆಡಳಿತ ಪಕ್ಷವೂ ನಿಮ್ಮದೇ ಆಗಿರುವುದರಿಂದ ಗೋಶಾಲೆ ದ್ವಂಸ ಪ್ರಕರಣವು ಹಲವಾರು ಸಂಶಯಗಳಿಗೆ ಕಾರಣವಾಗುತ್ತಿದೆ. ಅವರದೇ ಪಕ್ಷದ ಹಲವಾರು ಕಾರ್ಯಕರ್ತರು ಗೋಶಾಲೆ ದ್ವಂಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಈ ಪ್ರಕರಣದ ಕುರಿತು ಸುನೀಲ್ ಕುಮಾರ್ ಅವರು ಒಂದೇ ಒಂದು ಶಬ್ದ ಮಾತನಾಡದೇ ಇರುವುದು ಶಾಸಕರೂ ಗೋಶಾಲೆ ದ್ವಂಸದಲ್ಲಿ ಕೈ ಜೋಡಿಸಿದ್ದಾರೆಯೇ ಎನ್ನುವ ಬಗ್ಗೆ ಅನುಮಾನಗಳು ಮೂಡುತ್ತಿವೆ ಎಂದು ಕೃಷ್ಣ ಶೆಟ್ಟಿ ಬಜಗೋಳಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಶಾಸಕರಲ್ಲಿ ಕಾರ್ಕಳದ ಜನತೆಯು ಸ್ಪಷ್ಟನೆಯನ್ನು ಕೇಳಲು ಬಯಸುತ್ತದೆ ಎಂದು ಕಾರ್ಕಳದ ಜನತೆಯ ಪರವಾಗಿ ಕೃಷ್ಣ ಶೆಟ್ಟಿ ಬಜಗೋಳಿಯವರು ಕಾರ್ಕಳ ಶಾಸಕರ ಸ್ಪಷ್ಟೀಕರಣಕ್ಕೆ ಒತ್ತಾಯಿಸಿದ್ದಾರೆ.


Spread the love