ಬಜೆಟ್‌ ಕುರಿತು ದಕ ಜಿಲ್ಲಾ ಕಾಂಗ್ರೆಸ್‌ ನಾಯಕರ ಪ್ರತಿಕ್ರಿಯೆ

Spread the love

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ ಕುರಿತು ಕಾಂಗ್ರೆಸ್‌ ನಾಯಕರ ಪ್ರತಿಕ್ರಿಯೆ

-ಕೆ.ಹರೀಶ್ ಕುಮಾರ್ (ಶಾಸಕರು, ವಿಧಾನ ಪರಿಷತ್ ಹಾಗೂ ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ)

ಕಳೆದ ವರ್ಷದ ಸಪ್ಪೆ ಬಜೆಟ್ ನ ಮುಂದುವರಿದ ಭಾಗ ಈ ಬಜೆಟ್ ಆಗಿದೆ. ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರ ಮತ್ತು ಬೀಡಿ ಉದ್ಯಮದ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಜಿಲ್ಲೆಯ ಎಂಡೋ ಪೀಡಿತರನ್ನು ಸಂಪೂರ್ಣ ನಿರ್ಲಕ್ಷಿಸಿರುವುದು ತುಂಬಾ ನೋವಾಗಿದೆ ಮತ್ತು 72 ಸಾವಿರ ಕೋಟಿ ಸಾಲ ಮಾಡಿರುವುದು ಈ ಬಜೆಟ್ ನ ಸಾಧನೆಯಾಗಿದೆ.

ಬಿ.ರಮಾನಾಥ ರೈ, ಮಾಜಿ ಸಚಿವರು

“ಬಿಜೆಪಿ ಸರಕಾರದಿಂದಾಗಿ ಕರ್ನಾಟಕ ಕರಾವಳಿ ಜಿಲ್ಲೆಗಳ ಪಾಲಿಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕರಾವಳಿಯ ಪ್ರವಾಸೋದ್ಯಮವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಮೀನುಗಾರಿಕಾ ಮೂಲಭೂತ ಸೌಕರ್ಯ ಸೇರಿದಂತೆ ರಸ್ತೆ ಸಂಪರ್ಕ ಇತ್ಯಾದಿ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಯಾವುದೇ ಹೊಸ ಯೋಜನೆಗಳನ್ನು ಮುಖ್ಯಮಂತ್ರಿ ಘೋಷಣೆ ಮಾಡಿಲ್ಲ. ಸಿದ್ದರಾಮಯ್ಯ ಅವರು ಮಿಗತೆ ಬಜೆಟ್ ಮಂಡಿಸುತ್ತಿದ್ದರು. ಈಗ ಬಜೆಟ್ ಕೊರತೆ ಹೆಚ್ಚಾಗಿದೆ, ಸಾಲದ ಪ್ರಮಾಣ ಹೆಚ್ಚಾಗಿದೆ. ಕೇಂದ್ರದ ತೆರಿಗೆ ಪಾಲು ಕಡಿಮೆಯಾಗಿದೆ. ಇದು ರಾಜ್ಯಕ್ಕೆ ಮಾರಕವಾಗಿದೆ. “

ಸಿ.ಎಂ. ಮುಸ್ತಾಫ (ಅಧ್ಯಕ್ಷರು, ಮಂಗಳೂರು ಮೀನು ಮಾರಾಟ ಕಮೀಷನ್ ಏಜಂಟರ ಸಂಘ)

“ಡೀಪ್ ಫಿಶಿಂಗಿಗೆ ಬೆಂಬಲ ನೀಡಿ ಮತ್ಸ್ಯ ಕ್ಷಾಮ ಆಗುವಂತಾಗಬಾರದು, ಮೀನುಗಾರಿಕ ಬಂದರು, ಮೀನು ಮಾರುಕಟ್ಟೆ ಹೈಟೆಕ್ ಆಗಬೇಕು. ಡೀಸೆಲ್ ಸಮಸ್ಯೆ ಪರಿಹರಿಸಬೇಕಿತ್ತು. ಮೀನುಗಾರಿಕಾ ಬಂದರಿನಲ್ಲಿ ಸೌಲಭ್ಯ ನೀಡಬೇಕಾಗಿತ್ತು. ಮೀನುಗಾರಿಕಾ ರಸ್ತೆ ನಿರ್ಮಾಣ ಆಗಬೇಕಾಗಿದೆ. ಮೀನುಗಾರಿಕಾ ಕಾರ್ಮಿಕರಿಗೆ ಕನಿಷ್ಠ ವಸತಿ ಸೌಲಭ್ಯ ದೊರೆಯಲು ಯೋಜನೆ ಬಜೆಟ್ ನಲ್ಲಿ ಇಲ್ಲ.”


Spread the love