ಬಡತನ, ಅಸ್ಪಶ್ರ್ಯತೆ ಕಾಂಗ್ರೆಸ್‍ನ ಅರವತ್ತು ವರ್ಷದ ಆಡಳಿತದ ಕೊಡುಗೆ: ಸಚಿವ ಕೋಟ ತಿರುಗೇಟು

Spread the love

ಬಡತನ, ಅಸ್ಪಶ್ರ್ಯತೆ ಕಾಂಗ್ರೆಸ್‍ನ ಅರವತ್ತು ವರ್ಷದ ಆಡಳಿತದ ಕೊಡುಗೆ: ಸಚಿವ ಕೋಟ ತಿರುಗೇಟು

 
ಕುಂದಾಪುರ: ಕಾಂಗ್ರೆಸ್ ದುರಾಡಳಿತದ ಅರವತ್ತು ವರ್ಷ ದೇಶದಲ್ಲಿ ಅಸ್ಪ್ರಶ್ಯತೆ, ಬಡತನ ತಾಂಡವವಾಡುತ್ತಿತ್ತು. ಬಿಜೆಪಿ ಆಡಳಿತದ ಬಳಿಕ ಇದೀಗ ಎಲ್ಲವೂ ಸುಧಾರಣೆ ಆಗುತ್ತಿದೆ. ಕಾಂಗ್ರೆಸ್‍ಗೆ ವ್ಯಂಗ್ಯ ಮಾಡುವುದು ಬಿಟ್ಟರೆ ಬೇರೇನು ಸಾಧ್ಯವಿಲ್ಲ. ಬಡತನ, ಅಸ್ಪøಶ್ಯತೆ ಕಾಂಗ್ರೆಸ್‍ನ 60 ವರ್ಷ ದುರಾಡಳಿತದ ಬಹುದೊಡ್ಡ ಕೊಡುಗೆ ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.

ಅವರು ಮಂಗಳವಾರ ಕುಂದಾಪುರ ಮಿನಿವಿಧಾನ ಸೌಧದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಬೆಲೆ ಏರಿಕೆ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ಕೊಡುತ್ತಿರುವ ದೀಪಾವಳಿಯ ಗಿಫ್ಟ್ ಎಂಬ ಕಾಂಗ್ರೆಸ್ ವ್ಯಂಗ್ಯಕ್ಕೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿರುಗೇಟು ನೀಡಿದರು.

ಸ್ವಾಭಾವಿಕವಾಗಿ ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕೆಲವು ಇಂಧನಗಳು, ತೈಲಗಳ ಬೆಲೆ ಏರಿಳಿಕೆಯಾಗುತ್ತಿದೆ. 60 ವರ್ಷ ದೇಶದ ಆಡಳಿತ ನಡೆಸಿದವರು ಈಗ ಆಡಳಿತ ನಡೆಸುವವರ ವಿರುದ್ಧ ಟೀಕೆ ಮಾಡುವುದು ಅವರ ಬೌದ್ಧಿಕವಾದ ನಂಬಿಕೆ ಕಳೆದುಕೊಂಡಿರುವುದನ್ನು ತೋರಿಸುತ್ತದೆ ಎಂದರು.

ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೋಟ, ಇಂತಹ ಸಂದರ್ಭದಲ್ಲಿ ಅದು ಕೊಡಿ ಇದು ಕೊಡಿ ಎಂದು ಹೇಳುವುದು ಶಿಷ್ಟಾಚಾರವಲ್ಲ. ಯಾರೇನೇ ಹೇಳಿದರು ಸರ್ಕಾರ ಪುನೀತ್ ಅವರಿಗೆ ಗೌರವ ಕೊಡಲಿದೆ. ಪುನೀತ್ ರಾಜ್‍ಕುಮಾರ್ ಕಲೆ, ಸಿನೆಮಾ ಸಹಿತ ಸಮಾಜದಲ್ಲಿನ ಪ್ರತಿ ಕುಟುಂಬಗಳ ವ್ಯಕ್ತಿಯ ಮನೆ ಮುಟ್ಟಿದ ವ್ಯಕ್ತಿ. ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗ, ಸಾಹಿತ್ಯ ಲೋಕ ಸಹಿತ ರಾಜ್ಯದ ಆರೂವರೆ ಕೋಟಿ ಜನರಿಗಾದ ನಷ್ಟ. ಅವರಿಗೆ ಯಾವ ಪ್ರಶಸ್ತಿ ನೀಡಿದರೂ ಕಡಿಮೆಯೇ. ಹಾಗಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಈಗಾಗಾಲೇ ಹೇಳಿದ್ದು ಪುನೀತ್ ರಾಜಕುಮಾರ್ ಅವರ ಗೌರವಕ್ಕೆ ತಕ್ಕಂತೆ ಸ್ಮಾರಕಗಳು, ಪ್ರಶಸ್ತಿಗಳನ್ನು ಕೊಡಲಾಗುವುದು ಎಂದಿದ್ದಾರೆ.

ಉಪ ಚುನಾವಣೆ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎನ್ನಲಾಗುವುದಿಲ್ಲ. ಆಯಾಯ ಸಂದರ್ಭಗಳ ಮೇಲೆ ಫಲಿತಾಂಶವಿರುತ್ತದೆ ಎಂದರು.


Spread the love