ಬಡವರಿಗಾಗಿ ಅಕ್ಕಿ ನೀಡದ ಕೇಂದ್ರದ ವಿರುದ್ದ ದೊಡ್ಡ ಮಟ್ಟದ ಹೋರಾಟ – ಡಿ ಕೆ ಶಿವಕುಮಾರ್

Spread the love

ಬಡವರಿಗಾಗಿ ಅಕ್ಕಿ ನೀಡದ ಕೇಂದ್ರದ ವಿರುದ್ದ ದೊಡ್ಡ ಮಟ್ಟದ ಹೋರಾಟ – ಡಿ ಕೆ ಶಿವಕುಮಾರ್

ಮೈಸೂರು: ನಾವು ಕೇಂದ್ರ ಸರ್ಕಾರದಿಂದ ಅಕ್ಕಿಯನ್ನು ಉಚಿತವಾಗಿ ಏನೂ ಕೇಳಿರಲಿಲ್ಲ ಆದರೂ ಕೂಡ ಕೊಡುವುದಿಲ್ಲ ಎಂದು ಹೇಳಿದ್ದು ಇದರ ವಿರುದ್ದ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸುತ್ತೇವೆ ಈ ಕುರಿತು ಶುಕ್ರವಾರ ಬೆಂಗಳೂರಿನಲ್ಲಿ ಮಾಹಿತಿ ನೀಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿಲು ಬಂದಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅನ್ನಭಾಗ್ಯ ಯೋಜನೆಯಡಿ 10ಕೆಜಿ ಅಕ್ಕಿಯನ್ನು ಜುಲೈ 1 ರಿಂದ ಕೊಡಬೇಕೆಂದು ತೀರ್ಮಾನಿಸಿದ್ದೇವೆ. ನಮ್ಮ ಬಳಿ ಅಕ್ಕಿ ಇಲ್ಲ ಎಂದು ಕೇಂದ್ರ ಸರ್ಕಾರದವರು ಕಾಗದ ಬರೆದಿದ್ದಾರೆ. ಹೀಗಾಗಿ ನಮಗೇನು ಉಳಿದಿಲ್ಲ ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಛತ್ತೀಸ್ ಘಡ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯದವರ ಜೊತೆ ಮಾತನಾಡಿದ್ದಾರೆ. ಅದನ್ನು ಯಾವ ರೀತಿ ಖರೀದಿ ಮಾಡಬೇಕು ಎನ್ನುವುದನ್ನು ನೋಡುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಈ ತಾರತಮ್ಯ ನೀತಿಯನ್ನು ನಾವು ಖಂಡಿಸುತ್ತೇವೆ. ನಮಗೆ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ರಾಜ್ಯಗಳಿಗೂ ಅಕ್ಕಿಯನ್ನು ವಿತ್ ಡ್ರಾ ಮಾಡಿದೆ ಎಂದು ಆರೋಪಿಸಿದರು.

ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿಲು ಸಾಧ್ಯವಿಲ್ಲ, ಕೆಲವು ಸಂಸ್ಥೆಗಳು ಬೇರೆ ಬೇರೆ ಏಜೆನ್ಸಿಗಳ ಮೂಲಕ ಖರೀದಿಸಬೇಕಾಗುತ್ತದೆ. ನಾವು ಯಾರ ಬಳಿಯೂ ಬೆರಳು ತೋರಿಸಿಕೊಳ್ಳುವ ರೀತಿ ಕೆಲಸ ಮಾಡುವುದಿಲ್ಲ. ತಿನ್ನುವ ಅಕ್ಕಿ ಮತ್ತು ಬಡವರ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.


Spread the love