ಬಡ ಮಧ್ಯಮ ವರ್ಗದ ರಕ್ತ ಹೀರುವ ಕೆಲಸವನ್ನು ಬಿಜೆಪಿ ಮಾಡಿದೆ: ವಿನಯ್ ಕುಮಾರ್ ಸೊರಕೆ

Spread the love

ಬಡ ಮಧ್ಯಮ ವರ್ಗದ ರಕ್ತ ಹೀರುವ ಕೆಲಸವನ್ನು ಬಿಜೆಪಿ ಮಾಡಿದೆ: ವಿನಯ್ ಕುಮಾರ್ ಸೊರಕೆ

ಉಡುಪಿ: ಬೆಲೆ ಏರಿಕೆ, ಧರ್ಮ ಧರ್ಮಗಳ ನಡುವೆ ಸಂಘರ್ಷದಿಂದ ಬಡ ಮಧ್ಯಮ ವರ್ಗದ ರಕ್ತವನ್ನು ಹೀರುವ. ಕೆಲಸವನ್ನು ಬಿಜೆಪಿ ಮಾಡಿದೆ ಅಂತಾ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಅವರು ಮಣಿಪುರ ದೆಂದೂರು ಭಾಗದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಬಡ ಮಧ್ಯಮ ವರ್ಗದ ಪಕ್ಷ. ಬಡ ಮಧ್ಯಮ ವರ್ಗದವರಿಗೆ ಬಹಳಷ್ಟ ಯೋಜನೆಗಳನ್ನು ತಂದಿದ್ದು ಅವೆಲ್ಲಾ ಯೋಜನೆಗಳು ನಿಂತು ಹೋಗಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಇನ್ನು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ… ಬಡ ಮಧ್ಯಮ ವರ್ಗಕ್ಕೆ ಆರ್ಥಿಕ ವಾಗಿ ಸದ್ರಢರಾಗಬೇಕಾದರೆ ಕಾಂಗ್ರೆಸ್ ಪಕ್ಷ ವನ್ನು ಮತ್ತೆ ಬೆಂಬಲಿಸಬೇಕು ಅಂತಾ ಸೊರಕೆ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಪ್ರಸಾದ್ ಶೆಟ್ಟಿ, ವಿನ್ಸೆಂಟ್, ಹಸನ್ ಶೇಖ್, ಡೆನ್ಸಿಲ್, ದೇವೆಂದ್ರ ಶೆಟ್ಟಿ, ಹಮೀದ್, ಅಬ್ದುಲ್ ಅಜೀದ್ ಉಪಸ್ಥಿತರಿದ್ದರು.


Spread the love